ಕರ್ನಾಟಕ

karnataka

ETV Bharat / state

ಎಂಜಿನ್ ಇಲ್ಲದೆ ಬ್ಯಾಟರಿ ಮೇಲೆ ಓಡುವ ಕಾರು: ಕುಂದಾ ಕುವರನ ಇ-ಕಾರ್..! - ಲಾಕ್​ಡೌನ್​ ವೇಳೆ ಬಾಲಕನ ಲಕ್ ಬದಲಿಸಿದ ಕಾರ್

ಕಾರ್ ಕಾರ್ ಕಾರ್ ಇಲ್ನೋಡಿ ಈ ಕಾರ್. ಇದು ಅಂತಿಂಥ ಕಾರ್​ ಅಲ್ಲ, ಇದಕ್ಕೆ ಚಲಿಸಲು ಇಂಧನ ಬೇಕಿಲ್ಲ. ಇದನ್ನು ತಯಾರಿಸಿದ್ದು 10ನೇ ತರಗತಿ ಬಾಲಕ. ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿದ್ದಾನೆ ಬೆಳಗಾವಿಯ ಈ ಪೋರ.

A special car made by a 15 year old girl
ಎಂಜಿನ್ ಇಲ್ಲದೆ ಬ್ಯಾಟರಿ ಮೇಲೆ ಓಡುವ ಕಾರ್

By

Published : Jan 15, 2021, 6:03 AM IST

ಬೆಳಗಾವಿ:ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು 10ನೇ ತರಗತಿ ಬಾಲಕನೊಬ್ಬ ತೋರಿಸಿದ್ದಾನೆ. ಬ್ಯಾಟರಿಯ ಮೇಲೆ ಚಲಿಸುವ ಕಾರನ್ನು ತಯಾರಿಸಿ, ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾನೆ.

ಹೌದು, ಬೆಳಗಾವಿಯ ಜಾಧವ್ ನಗರದ ನಿವಾಸಿ ವಿನಾಯಕ ರಾವ್ ಅವರ ಪುತ್ರ ಅನ್ಶ್​ ರಾವ್​ ಕಾರು ಈ ತಯಾರಿಸಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ಈ ಹುಡುಗನಿಗೆ ಚಿಕ್ಕ ವಯಸ್ಸಿನಿಂದಲೂ ಕಾರು ತಯಾರಿಸುವ ಕನಸಿತ್ತು. ಲಾಕ್​ಡೌನ್‌ನ ಸಮಯವನ್ನ ಸದುಪಯೋಗಪಡಿಸಿಕೊಂಡ ಈ ಪೋರ, ಗೂಗಲ್​ ಮತ್ತು ಯೂಟ್ಯೂಬ್​ ಸಹಾಯದಿಂದ ಕಾರು ತಯಾರಿಸುವ ವಿಧಾನವನ್ನು ತಿಳಿದುಕೊಂಡಿದ್ದಾನೆ.

ಕಾರು ತಯಾರಿಸುವ ಬಗ್ಗೆ ಅನ್ಶ್‌ ತಮ್ಮ ತಂದೆಯ ಬಳಿ ಹೇಳಿದಾಗ, ದೊಡ್ಡ ಉದ್ಯಮಿ ಆದ್ರೂ, ಮೊದ ಮೊದಲು ಮಗನಿಗೆ ಕಾರು ಆರ್ಥಿಕ ಸಹಾಯ ನೀಡಲು ಹಿಂದೇಟು ಹಾಕಿದ್ದಾರೆ. ಆದರೆ, ಮಗನ ಕನಸಿಗೆ ನೀರೆರೆಯಲು ವಿನಾಯಕ ರಾವ್ ಆರಂಭದಲ್ಲಿ 10 ಸಾವಿರ ರೂಪಾಯಿ ನೀಡಿದ್ದರು. ಇದೇ ಹಣ ಬಳಸಿ ಅನ್ಶ್, ಗುಜರಿ ಅಂಗಡಿಗಳಲ್ಲಿ ಕಚ್ಚಾ ವಸ್ತುಗಳನ್ನೆಲ್ಲ ಕಲೆ ಹಾಕಿದ್ದಾರೆ. ಕಾರು ತಯಾರಿಸಲು ಮಗ ಪಡುತ್ತಿದ್ದ ಪ್ರಯತ್ನ ಗಮನಿಸಿದ ತಂದೆ, ಆತನಿಗೆ ಸಂಪೂರ್ಣ ಹಣ ನೀಡಲು ಮುಂದಾಗಿದ್ದಾರೆ. ವಿನಾಯಕ ರಾವ್ ಅವರ ಸ್ನೇಹಿತರೊಬ್ಬರು ತಮ್ಮ ಕಾರ್ಖಾನೆಯಲ್ಲಿನ ಒಂದು ಭಾಗವನ್ನ ಅನ್ಶ್​ನ ಕಾರು ತಯಾರಿಕೆಗೆ ಒದಗಿಸಿದ್ದಾರೆ.

ಎಂಜಿನ್ ಇಲ್ಲದೆ ಬ್ಯಾಟರಿ ಮೇಲೆ ಓಡುವ ಕಾರ್

ಗೂಗಲ್, ಯುಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಕಲೆ ಹಾಕಿದ ಅನ್ಶ್, ಡೋರ್, ಬಾನೆಟ್, ಆಟೋ ಟೈಯರ್ ಸಂಗ್ರಹಿಸಿದ್ದಾನೆ. ಬಳಿಕ ಎಲ್ಲವನ್ನೂ ವೆಲ್ಡಿಂಗ್​ ಮಾಡುತ್ತಾ, ಹಳೆ ಟೈಯರ್​ಗಳನ್ನು ಜೋಡಿಸಿ ಅದಕ್ಕೆ ಕಾರಿನ ರೂಪ ಕೊಟ್ಟಿದ್ದಾನೆ. ಈ ಕಾರಿನ ವಿಶೇಷತೆ ಅಂದ್ರೆ ಇದಕ್ಕೆ ಸೈಡ್​ ಮಿರರ್​ಗಳ ಬದಲಿಗೆ ಕಾಮೆರಾಗಳನ್ನು ಅಳವಡಿಸಲಾಗಿದೆ.

ಈ ಕಾರಿಗೆ ಬೇಕಿಲ್ಲ ಇಂಧನ: ಈ ಕಾರಿಗೆ ಫ್ರಂಟ್ ಹಾಗೂ ಬ್ಯಾಕ್ ಕ್ಯಾಮರಾ ಸಹ ಇದ್ದು, ಸ್ಟೇರಿಂಗ್ ಪಕ್ಕದಲ್ಲೇ ಡಿಸ್​ಪ್ಲೇ ಅಲವಡಿಸಲಾಗಿದೆ. ಬ್ಯಾಟರಿಯ ಮೇಲೆ ಚಲಿಸುವ ಕಾರು ಇದಾಗಿದ್ದರಿಂದ, ಈ ಕಾರಿಗೆ ಗಿಯರ್ ಇಲ್ಲ, ಎಂಜಿನ್​ ಇಲ್ಲ. ಸಂಪೂರ್ಣ ಬ್ಯಾಟರಿ ಮೇಲೆ ಓಡಬಲ್ಲದು. 12 ವ್ಯಾಟ್‍ನ ನಾಲ್ಕು ಬ್ಯಾಟರಿಗಳನ್ನ ಈ ಕಾರಿಗೆ ಅಳವಡಿಸಿದ್ದು, ನಾಲ್ಕು ಗಂಟೆಗಳ ಕಾಲ ಚಾರ್ಜ್ ಮಾಡಿದ್ರೆ 70 ಕಿ.ಮೀ. ವರೆಗೆ ಚಲಿಸುತ್ತದೆ.

ಈ ವಿಶೇಷ ಈಗಾಗಲೇ ರೂಪುಗೊಂಡಿದೆ. ಹೇಗೆ ಬೇಕಾದ್ರೂ ಚಲಿಸುತ್ತೆ. ಪೇಂಟಿಂಗ್ ಮೂಲಕ ತನ್ನೀ ಕನಸಿಗೆ ಅನ್ಶ್ ಅಂತಿಮ ಟಚ್ ನೀಡಬೇಕಿದೆ. ಅಂದಾಜು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ವೆಚ್ಚದಲ್ಲಿಯೇ ಇನ್ನೆರಡು ವಾರಗಳಲ್ಲಿ ಸಂಪೂರ್ಣ ಸಿದ್ಧಗೊಳ್ಳಲಿರುವ ಅನ್ಶ್ ಕನಸಿನ ಕಾರು ಸವಾರಿಗೆ ಹೊರಡಲು ರೆಡಿಯಾಗುತ್ತೆ. ಕಾರಿನ ಕನಸಿಗೆ ಇನ್ನೊಂದಿಷ್ಟು ಪಾಲಿಶ್ ಆದ್ರೆ, ಅನ್ಶ್ ನಿಜಕ್ಕೂ ಅದ್ಭುತವನ್ನೇ ಸೃಷ್ಟಿಸಿದಂತಾಗುತ್ತೆ.

ABOUT THE AUTHOR

...view details