ಕರ್ನಾಟಕ

karnataka

ETV Bharat / state

ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸರಳ ದಸರಾ: ಆನ್​​ಲೈನ್‌‌ನಲ್ಲಿ ದರ್ಶನ ಭಾಗ್ಯ - simple Dussehra ritual at the Veerabhadreshwara temple

ಕಳೆದ ಹಲವು ವರ್ಷಗಳಿಂದ ದಸರಾ ಹಿನ್ನೆಲೆಯಲ್ಲಿ ಯಡೂರಿನ ವೀರಭದ್ರ ದೇವಸ್ಥಾನದಲ್ಲಿ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಾ ಬರುತ್ತಿದ್ದವು. ಆದರೆ ಈ ಬಾರಿ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ.

A simple Dussehra ritual at the Veerabhadreshwara temple in Yediyur
ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸರಳ ದಸರಾ

By

Published : Oct 23, 2020, 10:37 AM IST

ಚಿಕ್ಕೋಡಿ: ಉತ್ತರ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ತಾಲೂಕಿನ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಈ ಬಾರಿ ದಸರಾ ಮಹೋತ್ಸವವನ್ನು ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.

ಸ್ಥಳೀಯ ಭಕ್ತರು ಮಾಸ್ಕ್, ಸ್ಯಾನಿಟೈಸರ್​, ಸಾಮಾಜಿಕ ಅಂತರ ಕಾಯ್ದುಕೊಂಡು ಶ್ರೀ ವೀರಭದ್ರೇಶ್ವರನ ದರ್ಶನ ಪಡೆದುಕೊಂಡರೆ, ಪಕ್ಕದ ಮಹಾರಾಷ್ಟ್ರ ಹಾಗೂ ಅಂತಾರಾಜ್ಯ ಭಕ್ತರಿಗೆ ಆನ್‌ಲೈನ್ ಮೂಲಕ ದೇವಿಯ ಪೂಜೆಯ ದರ್ಶನ ಭಾಗ್ಯವಾಗಲಿದೆ ಎಂದು ಯಡೂರು ಮಠದ ಶ್ರೀಶೈಲ ಶಾಸ್ತ್ರಿ ಹೇಳಿದ್ದಾರೆ.

ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸರಳ ದಸರಾ

ಯಡೂರಿನ ಮಠದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೊರೊನಾ ಮಹಾಮಾರಿಯಿಂದ ಇಡೀ ದೇಶವೇ ತಲ್ಲಣಗೊಂಡಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಮಹಾಮೃತ್ಯುಂಜಯ ಹೋಮ ನಡೆಸಲಾಗುತ್ತಿದೆ. ಮತ್ತೊಂದು ಕಡೆ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಲಿನಲ್ಲಿ ನಿಂತು ಸಾಮೂಹಿಕ ಅಭಿಷೇಕದ ದರ್ಶನ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಕಳೆದ ಹಲವು ವರ್ಷಗಳಿಂದ ದಸರಾ ಹಿನ್ನೆಲೆಯಲ್ಲಿ ಯಡೂರಿನ ವೀರಭದ್ರ ದೇವಸ್ಥಾನದಲ್ಲಿ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಾ ಬರುತ್ತಿದ್ದವು. ಆದರೆ ಈ ಬಾರಿ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ ಎಂದರು.

ಕೇವಲ ಅತ್ಯವಶ್ಯಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವೀರಭದ್ರ ದೇವಸ್ಥಾನದಲ್ಲಿ ದಸರಾ ಹಿನ್ನೆಲೆಯಲ್ಲಿ ಏಳು ದಿನಗಳ ಕಾಲ ಶಿವ ಸಪ್ತಾಹ ಎನ್ನುವ ಕಾರ್ಯಕ್ರಮ ಕಳೆದ 116 ವರ್ಷಗಳಿಂದ ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿತ್ತು. ಇದರಲ್ಲಿ ಏಳು ದಿನಗಳ ಕಾಲ ಪ್ರವಚನ, ಭಜನೆ, ಕೀರ್ತನೆ, ಮಹಾಪ್ರಸಾದ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿದ್ದವು. ಆದರೆ ಈ ಬಾರಿ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ದಸರಾ ಹಿನ್ನೆಲೆಯಲ್ಲಿ ಯಡೂರಿನ ಶ್ರೀ ವೀರಭದ್ರ ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ ,ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿ ಬಂದು ದೇವರಿಗೆ ಎಣ್ಣೆ ದೀಪವನ್ನು ಹಚ್ಚಿ ಹೋಗುವ ಪರಂಪರೆಯಿದೆ. ಅದರೆ ಈ ಬಾರಿ ಭಕ್ತರಿಗೆ ಅವಕಾಶ ನೀಡಲಾಗಿಲ್ಲ. ಅಂತಾರಾಜ್ಯ ಭಕ್ತರಿಗೆ Shri Veerbhadradev kaddevar math Yadur ಎಂಬ ಫೇಸ್​​ಬುಕ್ ಪೇಜ್​​​ ಮೂಲಕ ವೀರಭದ್ರೇಶ್ವರ ಹಾಗೂ ದಸರಾ ಕಾರ್ಯಕ್ರಮಗಳನ್ನು ಲೈವ್ ನೀಡಲಾಗುತ್ತಿದ್ದು, ಭಕ್ತರು ಆನ್‌ಲೈನ್ ಮೂಲಕ‌ ದೇವರ ದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details