ಬೆಳಗಾವಿ:ಇಬ್ಬರು ಹೆಣ್ಣುಮಕ್ಕಳನ್ನು ಕೆರೆಗೆ ಎಸೆದು ಬಳಿಕ ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಮದುರ್ಗ ತಾಲೂಕಿನ ಹನಮಾಪುರ ಗ್ರಾಮದಲ್ಲಿ ನಡೆದಿದೆ.
ಇಬ್ಬರು ಹೆಣ್ಣುಮಕ್ಕಳನ್ನು ಕೆರೆಗೆಸೆದು ಆತ್ಮಹತ್ಯೆಗೆ ಶರಣಾದ ತಾಯಿ... ರಾಮದುರ್ಗದಲ್ಲಿ ದುರಂತ! - ಹಣಮಾಪುರ ಗ್ರಾಮದ ಲಕ್ಷವ್ವ ವಡ್ಡರ್
ರಾಮದುರ್ಗ ತಾಲೂಕಿನ ಹನಮಾಪುರ ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೆರೆಗೆಸೆದು ಬಳಿಕ ತಾನೂ ಸಹ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೆಣ್ಣುಮಕ್ಕಳನ್ನು ಕೆರೆಗೆಸೆದು ಆತ್ಮಹತ್ಯೆಗೆ ಶರಣಾದ ತಾಯಿ
ಹನಮಾಪುರ ಗ್ರಾಮದ ಲಕ್ಷ್ಮವ್ವ ವಡ್ಡರ್ (35) ತಮ್ಮ ಇಬ್ಬರು ಹೆಣ್ಣುಮಕ್ಕಳ ಜತೆಗೆ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಕೀರ್ತಿ (10) ಹಾಗೂ ಶ್ರಾವಣಿ (3) ಎಂಬ ಇಬ್ಬರು ಹೆಣ್ಣುಮಕ್ಕಳನ್ನು ಮೊದಲು ಕೆರೆಯಲ್ಲಿ ಎಸೆದ ಲಕ್ಷ್ಮವ್ವ ಬಳಿಕ ತಾನೂ ಸಹ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾಳೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರಾಮದುರ್ಗ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Jan 9, 2020, 12:58 PM IST