ಅಥಣಿ (ಬೆಳಗಾವಿ):ದಾರಿಯ ಮಧ್ಯದಲ್ಲಿಯೇ ಆ್ಯಂಬುಲೆನ್ಸ್ನಲ್ಲಿ ಹೆರಿಗೆ ಆಗಿರುವ ಘಟನೆ ಅಥಣಿ ತಾಲೂಕಿನ ತೇಲಸಂಗ ಆರೋಗ್ಯ ಸಮುದಾಯ ಕೇಂದ್ರ ವ್ಯಾಪ್ತಿಯಲ್ಲಿ ನಡೆದಿದೆ.
ಆ್ಯಂಬುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ - birth to a baby in the ambulance on the way
ಅಥಣಿ ತಾಲೂಕಿನ ತೇಲಸಂಗ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ದಾರಿ ಮಧ್ಯೆ ಆ್ಯಂಬುಲೆನ್ಸ್ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
![ಆ್ಯಂಬುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ ದಾರಿಯ ಮಧ್ಯದಲ್ಲಿಯೇ ಆ್ಯಂಬುಲೆನ್ಸ್ನಲ್ಲಿ ಹೆರಿಗೆ](https://etvbharatimages.akamaized.net/etvbharat/prod-images/768-512-8987649-14-8987649-1601394462925.jpg)
ತಾಲೂಕಿನ ರಾಮತೀರ್ಥ ಗ್ರಾಮದ ಅಮ್ಮಾಜೇಶ್ವರಿ ಹನುಮಂತ ಹೊನಬನ್ನಿ ಅವರು ಹೆರಿಗೆಗಾಗಿ, ಅಥಣಿ ತಾಲೂಕು ಆರೋಗ್ಯ ಕೇಂದ್ರಕ್ಕೆ ಬರುವ ಸಂದರ್ಭದಲ್ಲಿ ಕೋಹಳ್ಳಿ ಐಗಳಿ ಗ್ರಾಮದ ಸಮೀಪ ಹೆರಿಗೆ ನೋವು ಜಾಸ್ತಿಯಾಗಿದೆ. ಶುಶ್ರೂಷಕ , ಸಿಬ್ಬಂದಿ, ಆಶಾ ಕಾರ್ಯಕರ್ತೆ ಹಾಗೂ ಪೈಲೆಟ್ ಅವರ ಸಮಯ ಪ್ರಜ್ಞೆಯಿಂದ ಯಾವುದೇ ತೊಂದರೆ ಉಂಟಾಗದೇ ಹೆರಿಗೆ ಮಾಡಿಸಲಾಗಿದೆ.
ಆ್ಯಂಬುಲೆನ್ಸ್ನಲ್ಲಿದ್ದ ಶುಶ್ರೂಷಕ ಗೌಸ್ ಪಾಕ್ ಬಿಸ್ತಿ , ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆ ರತ್ನಾಬಾಯಿ ಇಬ್ಬರು ಜೊತೆಗೂಡಿ ಹೆರಿಗೆ ಮಾಡಿಸಿದ್ದಾರೆ. ಯಾವುದೇ ತೊಂದರೆ ಇಲ್ಲದೇ ಅಮ್ಮಾಜೇಶ್ವರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಇಬ್ಬರಿಗೂ ತೇಲಸಂಗ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಹಾಗೂ ಬಾಣಂತಿ ಆರೋಗ್ಯವಾಗಿದ್ದಾರೆ. ಆ್ಯಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
TAGGED:
ಅಥಣಿ ತಾಲೂಕಿನ ತೇಲಸಂಗ