ಕರ್ನಾಟಕ

karnataka

ETV Bharat / state

ರಾಯಭಾಗ : 3 ವರ್ಷದ ಮಗಳ ಜೊತೆ ಬಾವಿಗೆ ಹಾರಿದ ತಾಯಿ - ತಾಯಿ ಮಗಳು ಆತ್ಮಹತ್ಯೆ

ತಾಯಿ-ಮಗು ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ರಾಯಭಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

ಆತ್ಮಹತ್ಯೆ
ಆತ್ಮಹತ್ಯೆ

By

Published : Sep 17, 2021, 3:31 PM IST

ಚಿಕ್ಕೋಡಿ :ಮೂರು ವರ್ಷದ ಮಗುವನ್ನು ಬಾವಿಗೆ ತಳ್ಳಿ ಮಹಿಳೆಯೋರ್ವಳು ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ದೇವಾಪುರಹಟ್ಟಿ ಗ್ರಾಮದ ರುಕ್ಮವ್ವಾ ಭರಮಾ ಹಳಿಂಗಳಿ (34) ಹಾಗೂ ಪುತ್ರಿ ಚಿನ್ನವ್ವ ಹಳಿಂಗಳಿ(3) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.

ತಾಯಿ-ಮಗು ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ರಾಯಭಾಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

("ನನ್ನ ಕಣ್ಣುಗಳನ್ನು ದಾನ ಮಾಡಿ".. ಡೆತ್​ನೋಟ್​ ಬರೆದಿಟ್ಟು ಬಿಜೆಪಿ ಸದಸ್ಯೆ ಆತ್ಮಹತ್ಯೆಗೆ ಶರಣು)

ABOUT THE AUTHOR

...view details