ಕರ್ನಾಟಕ

karnataka

ETV Bharat / state

ಕೋವಿಡ್​ ಹಿನ್ನೆಲೆ: ಕಂದಾಯ, ಆರೋಗ್ಯ ಸಚಿವರಿಂದ ಜಂಟಿ ಸಭೆ - ಬೆಳಗಾವಿ ಸುವರ್ಣ ವಿಧಾನಸೌಧದ

ವಿಶ್ವಾದ್ಯಂತ ಹೆಚ್ಚುತ್ತಲೇ ಇದೆ ಕೊರೊನಾ ಹಾವಳಿ - ಕೋವಿಡ್​ಗೆ ಸಂಬಂಧಿಸಿದಂತೆ ಇಂದು ಸಚಿವರಿಂದ ಸಭೆ- ಇಂದಿನಿಂದಲೇ ಜಾರಿಯಾಗಲಿದೆ ಹೊಸ ಗೈಡ್​ಲೈನ್ಸ್​

Revenue Minister R Ashok spoke about the meeting in the premises of Belgaum Suvarna Vidhana Soudha
ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಸಭೆ ಕುರಿತು ಮಾತನಾಡಿದ ಕಂದಾಯ ಸಚಿವ ಆರ್​ ಅಶೋಕ್

By

Published : Dec 26, 2022, 1:06 PM IST

ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಸಭೆ ಕುರಿತು ಮಾತನಾಡಿದ ಕಂದಾಯ ಸಚಿವ ಆರ್​ ಅಶೋಕ್

ಬೆಳಗಾವಿ:ಕೋವಿಡ್​ ಹಿನ್ನೆಲೆ ಕಂದಾಯ ಸಚಿವ ಆರ್​ ಅಶೋಕ್,​ ನಾನು ಮತ್ತು ಆರೋಗ್ಯ ಸಚಿವ ಸುಧಾಕರ್ ಇವತ್ತು ಹೊಸ ಗೈಡ್​ಲೈನ್ಸ್​ ಕುರಿತು ಸಭೆ ನಡೆಸಲಿದ್ದೇವೆ ಎಂದು ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರಪಂಚದಲ್ಲಿ ಕೋವಿಡ್​ ಜಾಸ್ತಿಯಾಗುತ್ತಿದೆ. ವಿಶೇಷವಾಗಿ ಚೈನಾ ಮತ್ತು ಅಮೆರಿಕ ಇಲ್ಲಿಂದ ಭಾರತಕ್ಕೆ ಕೂಡ ಪ್ರಯಾಣಿಕರು ಬಂದಿದ್ದಾರೆ. ಈಗಾಗಲೇ ಭಾರತದಲ್ಲಿಯು ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ವಿಚಾರದಿಂದ ಕರ್ನಾಟಕದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕಾಗಿದೆ. ಈ ದೃಷ್ಟಿಯಿಂದ ನಾನು ಹಾಗೂ ಆರೋಗ್ಯ ಸಚಿವ ಸುಧಾಕರ್​ ಇವತ್ತು ಈ ಕುರಿತಾಗಿ ಮಧ್ಯಾಹ್ನ ಮೀಟಿಂಗ್​ನ್ನು ಕರೆದಿದ್ದೇವೆ ಎಂದರು.

ಆ ಸಭೆಯಲ್ಲಿ ವಿಶೇಷವಾಗಿ ಕೋವಿಡ್​ ಅನ್ನು ನಿಯಂತ್ರಣ ಮಾಡುವುದರ ಬಗ್ಗೆ ಯಾವ ರೀತಿಯಾಗಿ ಒತ್ತನ್ನು ಕೊಡಬೇಕು ಎಂಬುದನ್ನು ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ಎರಡನೆಯ ಅಂಶ ಪ್ರಮುಖವಾಗಿ ನಮ್ಮ ಆಸ್ಪತ್ರೆಗಳಲ್ಲಿ ಆಕ್ಸಿಜನ್​ಗಳು ಹಾಗೆ ಔಷಧ ಇವುಗಳೆಲ್ಲವುಗಳ ದಾಸ್ತಾನುಗಳನ್ನು ಶೇಖರಣೆ ಮಾಡಬೇಕು. ಯಾವುದೆ ರೀತಿಯ ಸಂದರ್ಭ ಬಂದರೂ ಕೂಡ ನಿಭಾಯಿಸಲಿಕ್ಕೆ ಶಕ್ತಿ ಇರುವಂಥ ವ್ಯವಸ್ಥೆಯನ್ನು ಮಾಡುವಂತಹದ್ದು, ಇವತ್ತಿನ ಸಭೆಯ ಮುಖ್ಯ ಉದ್ದೇಶ ಎಂದು ಹೇಳಿದರು.

ಇದನ್ನೂ ಓದಿ:ಬಿಎಂಟಿಸಿ ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮಕ್ಕೆ ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ

ಮುಖ್ಯ ಮಂತ್ರಿಯಿಂದ ಸೂಚನೆ: ಹಾಗೆ ಹೊಸ ವರ್ಷದ ಸಂಭ್ರಮಾಚರಣೆ ಬರುತ್ತಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ನ್ಯೂ ಇಯರ್​ಗೆ ಸಂಬಂಧಿಸಿ ಗೈಡ್​ಲೈನ್ಸ್​ ಕೊಡಲು ಇದೆ. ಈ ಮೂರು ವಿಷಯಗಳ ಕುರಿತು ಚರ್ಚೆಗೆ ಇಟ್ಟಿದ್ದೇವೆ. ಜೊತೆಗೆ ಮಾನ್ಯ ಮುಖ್ಯಮಂತ್ರಿಗಳು ನನಗೆ ಕರೆಯನ್ನು ಮಾಡಿದ್ದರು. ಕೋವಿಡ್​ ವಿಚಾರವಾಗಿ ಏನೇನು ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಆ ಪ್ರಕಾರ ಇವತ್ತು ಸಭೆಯನ್ನು ಮಾಡುತ್ತೇವೆ ತಿಳಿಸಿದರು.

ಭಯ ಪಡುವ ಅವಶ್ಯಕತೆ ಇಲ್ಲ: ಇನ್ನು ಇವತ್ತು ನಾವು ಮಾಡುವ ಸಭೆಯಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಯಾರು ಭಯ ಪಡುವ ಅಗತ್ಯವಿಲ್ಲ. ವಾಣಿಜ್ಯ-ವ್ಯಾಪಾರಕ್ಕಾಗಲಿ, ಶಿಕ್ಷಣಕ್ಕಾಗಲಿ, ಕಂಪನಿ ಇಂಡಸ್ಟ್ರೀಸ್​​​​​​ಗಳಿಗಾಗಲಿ ಯಾವ ರೀತಿಯ ತೊಂದರೆ ಆಗುವುದಿಲ್ಲ. ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಏನು ಮಂಜಾಗೃತ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತೇವೆ. ಯಾರು ಕೋವಿಡ್​ ಕುರಿತು ಭಯ ಬೀಳುವಂತಹ ಅವಶ್ಯಕತೆ ಇಲ್ಲ. ಇವತ್ತು ಅಥವಾ ನಾಳೆಯ ಒಳಗಾಗಿ ಹೊಸ ಗೈಡ್​ಲೈನ್ಸ್​ನ ಸೂಚನೆ ತಿಳಿಸುತ್ತೇವೆ ಎಂದರು.

ಇದನ್ನೂ ಓದಿ:ವಿದೇಶದಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ ಕೋವಿಡ್ ಪಾಸಿಟಿವ್: ಇಬ್ಬರು ಹೋಂ ಐಸೋಲೇಷನ್

ABOUT THE AUTHOR

...view details