ಬೆಳಗಾವಿ: ಸೀಗೆ ಹುಣ್ಣಿಮೆ ಅಂಗವಾಗಿ ಪೂಜೆಗಾಗಿ ಜಮೀನಿಗೆ ಹೊಗಿದ್ದ ರೈತನೋರ್ವ ನೀರಿನ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ನಿಲಜಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಭೂ ತಾಯಿಯ ಪೂಜೆಗೆಂದು ತೆರಳಿದ್ದ ವ್ಯಕ್ತಿ ನೀರಿನ ಹೊಂಡಕ್ಕೆ ಬಿದ್ದು ಸಾವು - ಬೆಳಗಾವಿಯ ನಿಲಜಿ ಗ್ರಾಮದಲ್ಲಿ ಸಾವು
ಸೀಗೆ ಹುಣ್ಣಿಮೆ ಅಂಗವಾಗಿ ಪೂಜೆಗಾಗಿ ಜಮೀನಿಗೆ ಹೊಗಿದ್ದ ರೈತನೋರ್ವ ನೀರಿನ ಹೊಂಡದಲ್ಲಿ ಬಿದ್ದು ಬೆಳಗಾವಿಯ ನಿಲಜಿ ಗ್ರಾಮದಲ್ಲಿ ಮೃತಪಟ್ಟಿದ್ದಾನೆ.
ಮೃತಪಟ್ಟ ವ್ಯಕ್ತಿ
ನಿಲಜಿ ಗ್ರಾಮದ ತಾನಾಜಿ ಗಲ್ಲಿಯ ಪುನ್ನಪ್ಪ ಕಲ್ಲಪ್ಪ ಮನುರಕರ (35) ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ. ಸೀಗೆ ಹುಣ್ಣಿಮೆ ಅಂಗವಾಗಿ ಜಮೀನಿಗೆ ತೆರಳಿ ಪೂಜೆ ಮಾಡಿ ಮನೆಗೆ ಮರಳುತ್ತಿದ್ದ ವೇಳೆ ಆಯ ತಪ್ಪಿ ನೀರಿನ ಹೊಂಡದಲ್ಲಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಸುರಿದ ಮಳೆಯಿಂದಾಗಿ ಹೊಂಡದ ಸುತ್ತಮುತ್ತಲಿನ ಮಣ್ಣು ನೆನೆದಿದ್ದರಿಂದ ಪುನ್ನಪ್ಪ ಬರುವ ವೇಳೆ ಮಣ್ಣು ಕುಸಿದಿದೆ. ಈ ವೇಳೆ ಆಯ ತಪ್ಪಿ ನೀರು ತುಂಬಿದ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.