ಕರ್ನಾಟಕ

karnataka

ETV Bharat / state

ಡ್ರ್ಯಾಗನ್​ ರಾಷ್ಟ್ರದಲ್ಲಿ ಚಿಕ್ಕೋಡಿ ಯುವಕನ ಯೋಗ ಕ್ಲಾಸ್​.. ಚೀನಾದಲ್ಲಿ ತರಬೇತಿ ನೀಡುತ್ತಿರುವ ಕನ್ನಡಿಗ - ಚಿಕ್ಕೋಡಿ ಯುವಕನ ಯೋಗ ಕ್ಲಾಸ್

ಚೀನಾದ ಕ್ಯೂಮಿನಿಂಗ್ ನಗರದಲ್ಲಿ ಒಂದು ವರ್ಷ ಕಾಲ ಯೋಗ ಶಿಕ್ಷಕನಾಗಿ ಅಲ್ಲಿನ ಜನರಿಗೆ ಯೋಗದ ಮಹತ್ವ, ಯೋಗದ ಅರಿವು ಹಾಗೂ ಯೋಗದಿಂದ ಶರೀರಕ್ಕೆ ಆಗುವ ಲಾಭಗಳನ್ನು ತಿಳಿಸಿ ಕೊಡುವ ಮೂಲಕ ಭಾರತೀಯ ಯೋಗ ಪರಂಪರೆ ಮಹತ್ವವನ್ನು ಸಾರಿ ಹೇಳಿದ್ದಾರೆ ಬೆಳಗಾವಿಯ ಯುವಕ.

chikodi
ಯುವಕನ ಯೋಗ ಕ್ಲಾಸ್

By

Published : Feb 4, 2021, 11:27 AM IST

Updated : Feb 4, 2021, 11:49 AM IST

ಚಿಕ್ಕೋಡಿ(ಬೆಳಗಾವಿ): ಭಾರತ ದೇಶ ಯೋಗದಲ್ಲಿ ತನ್ನದೇ ಆದಂತಹ ಇತಿಹಾಸ ಪರಂಪರೆಯನ್ನು ಹೊಂದಿದೆ. ಈಗಾಗಲೇ ಹಲವಾರು ದೇಶಗಳು ಭಾರತದ ಪರಂಪರೆಗೆ ಮಾರುಹೋಗಿವೆ. ಹೀಗಾಗಿ ಜಗತ್ತಿನ ಹಲವಾರು ದೇಶಗಳು ಯೋಗದ ಮೊರೆ ಹೋಗುತ್ತಿದ್ದಾರೆ‌.

ಚೀನಾದಲ್ಲಿ ಚಿಕ್ಕೋಡಿ ಯುವಕನ ಯೋಗ ಕ್ಲಾಸ್

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಯುವಕನೊಬ್ಬ ಚೀನಾ ದೇಶದಲ್ಲಿ ಯೋಗಾಸನದ ಕೋಚ್‌ ಆಗಿ ವಿದೇಶಿಗರಿಗೆ ಯೋಗಾಸನವನ್ನು ಕಲಿಸುತ್ತಿದ್ದು, ಗಡಿ ಭಾಗದ ಜನರಲ್ಲಿ ಹೆಮ್ಮೆಯನ್ನುಂಟು‌ ಮಾಡಿದೆ. ಚೀನಾ ದೇಶದ ಜನರಿಗೆ ಯೋಗಾಸನವನ್ನು ಕಲಿಸಿ ಕೊಡುತ್ತಿರುವ ಈ ಯುವಕನ ಹೆಸರು ಕಾರ್ತಿಕ ಮಗದುಮ. ಮೂಲತಃ ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದ ಕಾರ್ತಿಕನಿಗೆ ಯೋಗ ಅಂದರೆ ಎಲ್ಲಿಲ್ಲದ ಪ್ರೀತಿ. ಬಾಲ್ಯದಿಂದಲೇ ಯೋಗಾಸನವನ್ನು ಹವ್ಯಾಸವನ್ನಾಗಿ ರೂಢಿಸಿಕೊಂಡು ಯೋಗದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಮಾಡುತ್ತಿದ್ದಾನೆ.

ಇತ್ತೀಚಿಗೆ ಚೀನಾ ದೇಶದ ಕ್ಯೂಮಿನಿಂಗ್ ನಗರದಲ್ಲಿ ಒಂದು ವರ್ಷಗಳ ಕಾಲ ಯೋಗ ಶಿಕ್ಷಕನಾಗಿ ಚೀನಾದ ಜನರಿಗೆ ಯೋಗದ ಮಹತ್ವ, ಯೋಗದ ಅರಿವು ಹಾಗೂ ಯೋಗದಿಂದ ಶರೀರಕ್ಕೆ ಆಗುವ ಲಾಭಗಳನ್ನು ತಿಳಿಸಿ ಕೊಡುವ ಮೂಲಕ ಭಾರತೀಯ ಯೋಗ ಪರಂಪರೆ ಮಹತ್ವವನ್ನು ಚೀನಾ ದೇಶದ ಜನರಿಗೆ ಸಾರಿ ಹೇಳಿದ್ದಾರೆ. ಚೀನಾ ದೇಶದಲ್ಲಿ ಒಂದು ವರ್ಷ ಕಾಲ ಕಾರ್ತಿಕ ಅವರು ಯೋಗ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದಾನೆ. ಕಡಿಮೆ ವಯಸ್ಸಿನಲ್ಲಿ ಯೋಗಾಸನ ಮೈಗೂಡಿಸಿಕೊಂಡು ವಿದೇಶಗಳಲ್ಲಿ ಯೋಗಶಿಕ್ಷಕನಾಗಿ ಕಾರ್ಯನಿರ್ವಹಿಸಿದ ಕಾರ್ತಿಕ್​ ಅವರ ಕಾರ್ಯ ಭಾರತ ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದೆ.

ಇದನ್ನೂ ಓದಿ:ಇಂದು ಸಂಜೆ ಸಚಿವ ಸಂಪುಟದ ಉಪ ಸಮಿತಿ ಸಭೆ.. ಕಡಲೆಕಾಳು, ತೊಗರಿ ಖರೀದಿ ಕುರಿತು ಚರ್ಚೆ

ಕೊರೊನಾ ಮಹಾಮಾರಿಯಿಂದ ದೇಶ ಲಾಕ್‌ಡೌನ್ ಆದಾಗ ಕಾರ್ತಿಕ್ ಅವರು ತಮ್ಮ ಸ್ವ ಗ್ರಾಮವಾದ ಚಂದೂರನಲ್ಲಿ ಇದ್ದರು. ಆಗ ಸ್ಥಳೀಯ ಮಕ್ಕಳಿಗೆ ಯೋಗಾಭ್ಯಾಸ ನೀಡುವುದಷ್ಟೇ ಅಲ್ಲದೇ ಚಿಕ್ಕೋಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಯೋಗಾಭ್ಯಾಸ ನೀಡಿದ್ದಾರೆ‌. ದಕ್ಷಿಣ ಕಾಶಿ ಎಂಬ ಖ್ಯಾತಿ ಪಡೆದಿರುವ ಯಡೂರ ಮಠದಲ್ಲಿನ ಮಕ್ಕಳಿಗೆ ಯೋಗಾಭ್ಯಾಸದ ಬಗ್ಗೆ ಹೇಳಿಕೊಟ್ಟಿದ್ದಾರೆ. ಕಾರ್ತಿಕ್ ಅವರಿಗೆ ಬಾಲ್ಯದಿಂದಲೂ ಯೋಗಾ ಅಂದರೆ ಇಷ್ಟವಂತೆ. ಈ ಬಾಲಕನ ಸಾಧನೆ ಇತರರಿಗೂ ಸಹಿತ ಮಾದರಿಯಾಗಿದ್ದು, ಚೀನಾ ದೇಶದಲ್ಲಿ ಈತ ಯೋಗಾಸನ ಹೇಳಿಕೊಡುವುದು ನಮ್ಮ ಜೆಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.

Last Updated : Feb 4, 2021, 11:49 AM IST

For All Latest Updates

ABOUT THE AUTHOR

...view details