ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಮೊಬೈಲ್​​​ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ಹಲ್ಲೆ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - man beaten mobile shop owner in belagavi

ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ‌ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ‌ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

mobile
ಮೊಬೈಲ್​ ಅಂಗಡಿಗೆ ನುಗ್ಗಿ ಹಲ್ಲೆ

By

Published : Dec 7, 2019, 10:48 AM IST

ಬೆಳಗಾವಿ: ಅಪರಿಚಿತ‌ ವ್ಯಕ್ತಿಯೋರ್ವ ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ‌ ಹಲ್ಲೆ‌ ನಡೆಸಿರುವ ಘಟನೆ ಬಾಪಟ್ ಗಲ್ಲಿಯ ಮಾತಾಜಿ ಮೊಬೈಲ್ ಸ್ಟೋರ್​​ನಲ್ಲಿ ನಡೆದಿದೆ.

ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಅಂಗಡಿಯೊಳಗೆ ನುಗ್ಗಿರುವ ದುಷ್ಕರ್ಮಿ ಮೊದಲು ವಾಗ್ವಾದ ನಡೆಸಿ ಬಳಿಕ ಹಲ್ಲೆ ಮಾಡಿದ್ದಾನೆ. ಮೊಬೈಲ್ ಅಂಗಡಿಗೆ ನುಗ್ಗಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.‌ ಡಿಸೆಂಬರ್ 5ರಂದು ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊಬೈಲ್ ಅಂಗಡಿ ಮಾಲೀಕ ಪ್ರಕಾಶ ಕುಮಾರ್ ಮೇಲೆ ಹಲ್ಲೆ‌ ಮಾಡಲಾಗಿದೆ. ಹಲ್ಲೆ ಮಾಡಿ ಊರು ಬಿಟ್ಟಿರುವ ಆರೋಪಿಗಾಗಿ ಪೊಲೀಸರು‌ ತೀವ್ರ ಶೋಧ ನಡೆಸಿದ್ದಾರೆ.

ಮೊಬೈಲ್​ ಅಂಗಡಿಗೆ ನುಗ್ಗಿ ಹಲ್ಲೆ

ಹಣದ ವಿಚಾರವಾಗಿ ದುಷ್ಕರ್ಮಿ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ‌ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details