ಬೆಳಗಾವಿ :ಮಹಾದೇವಿ ಎಂಬ ಯುವತಿಯನ್ನು ಪುನ್ರಾನಂದ ಸಣ್ಣಪ್ಪನವರ್ ಎಂಬಾತ ಎಂಟು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದ್ರೀಗ ಮೂರು ಮಕ್ಕಳಾದ ಬಳಿಕ ಹೇಳದೇ ಕೇಳದೆ ಬಿಟ್ಟು ಹೋಗಿದ್ದಾರೆ. ಇದೀಗ ಮಹಾದೇವಿ ಮೂರು ಮಕ್ಕಳನ್ನು ಕಟ್ಟಿಕೊಂಡು ಬೆಳಗಾವಿ ತಾಲೂಕಿನ ಕಾಕತಿ ಹೊರವಲಯದಲ್ಲಿದ್ದಾರೆ. ಖಾನಾಪುರ ತಾಲೂಕಿನ ದೇಮನಕಟ್ಟಿ ಎಂಬ ಗ್ರಾಮದ ಮಹಾದೇವಿಈಗ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ಗಂಡನಿಂದ ಕಿರುಕುಳ :ಮಹಾದೇವಿ, ಪುನ್ರಾನಂದನ ಪ್ರೀತಿಯಲ್ಲಿ ಬಿದ್ದ ಬಳಿಕ ಆತನನ್ನು ನಂಬಿ ಮನೆಬಿಟ್ಟು ಬಂದಿದ್ದಾರೆ. ಅಲ್ಲದೇ ಏಂಟು ವರ್ಷದ ಹಿಂದೆ ರಿಜಿಸ್ಟರ್ ಮದುವೆಯಾಗ್ತಾರೆ. ಇದಾದ ಬಳಿಕ ಕೆಲವು ಕಡೆಗಳಲ್ಲಿ ಕೆಲಸ ಮಾಡ್ತಾ ಕೊನೆಯಲ್ಲಿ ಕಾಕತಿ ಗ್ರಾಮದಲ್ಲಿ ಮನೆಯೊಂದನ್ನ ಬಾಡಿಗೆ ಪಡೆದು ವಾಸಿಸುತ್ತಿರುತ್ತಾರೆ.
ಈ ಪುನ್ರಾನಂದ ಕುಡಿದು ಬಂದು ಈಕೆಯನ್ನ ಹೊಡೆಯುವುದನ್ನ ಮಾಡುವುದಷ್ಟೇ ಅಲ್ಲದೇ ಈಕೆ ನಾಲ್ಕನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾನಂತೆ. ಗಂಡನ ಕಿರುಕುಳಕ್ಕೆ ಹೆದರಿ ಮನೆ ಬಿಟ್ಟ ಈಕೆ ಕಾಕತಿ ಗ್ರಾಮದ ಹೊರವಲಯದಲ್ಲೇ ಮರದ ಕೆಳಗೆ ಜಾಗ ಮಾಡಿಕೊಂಡು ಮೂರು ಮಕ್ಕಳನ್ನ ಕಟ್ಟಿಕೊಂಡು ಎರಡು ದಿನಗಳ ಕಾಲ ಅಲ್ಲೇ ಜೀವನ ಮಾಡಿದ್ದಾರೆ.