ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ತಂದೆಯಿಂದಲೇ ಮಗನಿಗೆ ಕೊಡಲಿ ಏಟು: ಪುತ್ರ ಸ್ಥಳದಲ್ಲೇ ಸಾವು - ಬೆಳಗಾವಿ ಕ್ರೈಂ

ದನಕ್ಕೆ ಮೇವು ಹಾಕುವ ವಿಚಾರಕ್ಕೆ ಸಂಬಧಿಸಿದಂತೆ ತಂದೆ ಮಗನ ನಡುವೆ ಗಲಾಟೆ ನಡೆದು, ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಪಾಪಿ ತಂದೆಯಿಂದಲೇ ಮಗನ ಎದೆಗೆ ಕೊಡಲಿ ಏಟು
ಪಾಪಿ ತಂದೆಯಿಂದಲೇ ಮಗನ ಎದೆಗೆ ಕೊಡಲಿ ಏಟು

By

Published : Jun 28, 2020, 11:38 AM IST

ಬೆಳಗಾವಿ: ದನಕ್ಕೆ ಮೇವು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮಗನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ತಂದೆಯೇ ಮಗನ ಎದೆಗೆ ಕೊಡಲಿ ಏಟು ನೀಡಿದ್ದ ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗೋಕಾಕ್​ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಮೇಲ್ಮನಹಟ್ಟಿ ಗ್ರಾಮದ ಯಮನಪ್ಪ ಗುತ್ತಿಗೆ (41) ಕೊಲೆಯಾದ ವ್ಯಕ್ತಿ. ದನಕ್ಕೆ ಮೇವು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಬಾಳಪ್ಪ ಗುತ್ತಿಗೆ ಹಾಗೂ ಮಗ ಯಮನಪ್ಪನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಬಾಳಪ್ಪನು ಮಗನ ಎದೆಗೆ ಕೊಡಲಿಯಿಂದ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೊಲೆ ಮಾಡಿದ ಬಳಿಕ ಬಾಳಪ್ಪ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಗೋಕಾಕ್​ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details