ಚಿಕ್ಕೋಡಿ : ಬೆಳೆ ಪರಿಹಾರದಿಂದ ಬಂದ ಹಣವನ್ನು ಕೇಳಿದಕ್ಕೆ ಸ್ವಂತ ಮಗನನ್ನೇ ತಂದೆ ಮಚ್ಚಿನಿಂದ ಹೊಡೆದು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದಿದೆ.
ಹಣ ಕೇಳಿದ್ದಕ್ಕೆ ಮಗನನ್ನೇ ಕೊಂದ ತಂದೆ...! - murder news
ಬೆಳೆ ಪರಿಹಾರದಿಂದ ಬಂದ ಹಣವನ್ನು ಕೊಡು ಎಂದು ಮಗ ಕೇಳಿದ ಹಿನ್ನೆಲೆಯಲ್ಲಿ ತಂದೆ-ಮಗನ ನಡುವೆ ಜಗಳ ನಡೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ.
ಮಗನನ್ನೇ ಕೊಂದ ತಂದೆ
ಕೇರೂರ ಗ್ರಾಮದ ಯಮನಪ್ಪ ಸಿದ್ದಪ್ಪ ನಿಡಗುಂದಿ (40) ವೃತ ವ್ಯಕ್ತಿ. ಸಿದ್ದಪ್ಪ ಯಮನಪ್ಪ ನಿಡಗುಂದಿ (60) ಕೊಲೆ ಮಾಡಿದ ವ್ಯಕ್ತಿ. ಬೆಳೆ ಪರಿಹಾರದಿಂದ ಬಂದ ಹಣವನ್ನು ಕೊಡು ಎಂದು ಮಗ ಕೇಳಿದ ಹಿನ್ನೆಲೆಯಲ್ಲಿ ತಂದೆ-ಮಗನ ನಡುವೆ ಜಗಳ ನಡೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಂಕಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.