ಅಥಣಿ :ತಾಲೂಕಿನ ಐಗಳಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ರೈತನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಭಿಮಪ್ಪ ಲಾಯಪ್ಪ ತಳವಾರ (65) ಮೃತ ರೈತ ಎಂದು ತಿಳಿದು ಬಂದಿದೆ.
ಐಗಳಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ರೈತನ ಸಾವು - ರೈತರ ಸಾವು ಪ್ರಕರಣ
ಬೋರ್ವೆಲ್ ಶುರು ಮಾಡಲೆಂದು ತೆರಳಿದ ರೈತನೋರ್ವ ವಿದ್ಯುತ್ ತಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನಡೆದಿದೆ.
ಮೃತ ರೈತ ಭಿಮಪ್ಪ ಲಾಯಪ್ಪ ತಳವಾರ
ಬೋರ್ವೆಲ್ ಶುರು ಮಾಡಲೆಂದು ತೆರಳಿದಾಗ ವಿದ್ಯುತ್ ತಾಗಿದ್ದು ರೈತ ಭಿಮಪ್ಪ ತಳವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಐಗಳಿ ಗ್ರಾಮದಲ್ಲಿ ಎರಡು ವಾರದ ಹಿಂದೆ ರೈತರೊಬ್ಬರು ಇದೇ ರೀತಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟರು. ಇದೀಗ ಆ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ರೈತನ ಸಾವಾಗಿದೆ. ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.