ಚಿಕ್ಕೋಡಿ: ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮುರ್ಗುಡ್ ರಸ್ತೆಯ ದೇವಚಂದ್ ಕಾಲೇಜ್ ಹತ್ತಿರ ನಡೆದಿದೆ.
ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು - ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮುರ್ಗುಡ್ ರಸ್ತೆ
ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೈಕ್ ಸವಾರ ಸಾವು
ನಿಪ್ಪಾಣಿ ತಾಲೂಕಿನ ಗಾಯಕವಾಡಿ ಗ್ರಾಮದ ರೈತ ವಿಠ್ಠಲ ರಾಮಚಂದ್ರ ಬೋಂಗಾರ್ಡೆ (45) ಮೃತ ವ್ಯಕ್ತಿ. ಈತ ನಿಪ್ಪಾಣಿನಗರದಿಂದ ಗಾಯಕವಾಡಿಗೆ ತೆರಳುತ್ತಿದ್ದ ವೇಳೆ ವಿಠ್ಠಲ್ ಲಾರಿ ಹಿಂದೆ ಇದ್ದರು. ದೇವಚಂದ್ ಕಾಲೇಜ್ ಸಮೀಪ ಲಾರಿ ಚಾಲಕ ಆಕಸ್ಮಿಕವಾಗಿ ಲಾರಿಯನ್ನು ಬಲಬದಿಗೆ ಚಲಾಯಿಸಿದ ಪರಿಣಾಮ ಹಿಂಬದಿಯಲ್ಲಿದ್ದ ದ್ವಿಚಕ್ರ ವಾಹನ ಜೋರಾಗಿ ಲಾರಿಗೆ ಅಪ್ಪಳಿಸಿದೆ.
ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ನಿಪ್ಪಾಣಿ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.