ಬೆಳಗಾವಿ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನವಜಾತ ಶಿಶುವನ್ನು, ಗುಜರಾತಿನ ಸೂರತ್ನಿಂದ ಬೆಳಗಾವಿಗೆ ಕರೆ ತರಲಾಗಿದೆ. ಸೂರತ್ನ ವೈದ್ಯರ ತಂಡ ವಿಶೇಷ ವಿಮಾನದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ನವಜಾತ ಶಿಶುವನ್ನು ಕರೆ ತಂದಿದ್ದಾರೆ. ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಿಂದ ಮೂಲಕ ಕೆಎಲ್ಇ ಆಸ್ಪತ್ರೆಗೆ ಮಗುವನ್ನು ಕರೆತಂದಿದ್ದು, ತುರ್ತು ಸಂದರ್ಭದಲ್ಲಿ ಮಗುವಿನ ಜೀವ ರಕ್ಷಣೆಗೆ ವೈದ್ಯರು ಶ್ರಮಿಸುತ್ತಿದ್ದಾರೆ.
ಚಿಕಿತ್ಸೆಗಾಗಿ ಸೂರತ್ನಿಂದ ಬೆಳಗಾವಿಗೆ ವಿಶೇಷ ವಿಮಾನದಲ್ಲಿ ಬಂದ ನವಜಾತ ಶಿಶು - a baby came to belagavi from surath by special flight
ಸೂರತ್ನ ವೈದ್ಯರ ತಂಡ ವಿಶೇಷ ವಿಮಾನದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ನವಜಾತ ಶಿಶುವನ್ನು ಕರೆ ತಂದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನವಜಾತ ಶಿಶುವನ್ನು, ಗುಜರಾತಿನ ಸೂರತ್ನಿಂದ ಬೆಳಗಾವಿಗೆ ಕರೆ ತರಲಾಗಿದೆ.
ಚಿಕಿತ್ಸೆಗಾಗಿ ಸೂರತ್ನಿಂದ ಬೆಳಗಾವಿಗೆ ವಿಶೇಷ ವಿಮಾನದಲ್ಲಿ ಬಂದ ನವಜಾತ ಶಿಶು
ಆರಂಭದಲ್ಲಿ ಮಗುವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಿ, ವಿಮಾನ ಬೆಂಗಳೂರಿಗೆ ಬಂದಿತ್ತು. ಕೊನೆ ಕ್ಷಣದಲ್ಲಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಿ, ಮಗುವನ್ನು ಇಲ್ಲಿಗೆ ಕರೆತರಲಾಗಿದೆ.