ಚಿಕ್ಕೋಡಿ:ಮಹಾರಾಷ್ಟ್ರದ ರಾಜಾಪುರ ಡ್ಯಾಂ ಬಳಿ ಹಾಕಲಾಗಿದ್ದ ಬೃಹತ್ ಮಣ್ಣಿನ ಒಡ್ಡು ಒಡೆದಿದ್ದು, ಡ್ಯಾಂನ ಎಲ್ಲಾ ಗೇಟ್ಗಳ ಮೂಲಕ ನೀರು ಕೃಷ್ಣಾ ನದಿ ಪ್ರವೇಶಿಸುತ್ತಿದೆ. ಬಿಡುಗಡೆಯಾದ ನೀರಿಗೆ ಅಳತೆಯೇ ಇಲ್ಲದಂತಾಗಿದೆ.
ನೀರಿನ ಒತ್ತಡದಿಂದಾಗಿ ರಾಜಾಪುರ ಬ್ಯಾರೇಜ್ ಬಳಿ ಹಾಕಲಾಗಿದ್ದ ಮಣ್ಣಿನ ಒಡ್ಡು ಒಡೆದಿದೆ. 64 ಗೇಟುಗಳ ಪೈಕಿ 11 ಗೇಟ್ಗಳಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿತ್ತು. ಉಳಿದ ಗೇಟುಗಳು ದುರಸ್ತಿ ಕಾರ್ಯ ನಡೆದಿದ್ದರಿಂದ ಬ್ಯಾರೇಜ್ನಿಂದ ಸುಮಾರು 30 ಕಿ ಮೀವರೆಗೆ ನೀರು ಸಂಗ್ರಹವಾಗಿತ್ತು. ಅಲ್ಲದೆ ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ನೀರಿನ ಪ್ರಮಾಣ ಹೆಚ್ಚಾಗಿ ಬೃಹತ್ ಪ್ರಮಾಣದ ಒಡ್ಡು ಒಡೆದಿದೆ.