ಕರ್ನಾಟಕ

karnataka

ETV Bharat / state

ಒಂದೇ ದಿನ 8 ಮಂದಿ ಗರ್ಭಿಣಿಯರಿಗೆ ವಕ್ಕರಿಸಿದ ವೈರಸ್: ಗೋಕಾಕ್​ ಆಸ್ಪತ್ರೆ ಸೀಲ್​ಡೌನ್​ - ಗರ್ಭಿಣಿಯರಿಗೆ ಕೊರೊನಾ ಸೋಂಕು

ಗೋಕಾಕ್ ನಗರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದ ಎಂಟು ಜನ ಗರ್ಭಿಣಿಯರಿಗೆ ನಿನ್ನೆಯಷ್ಟೇ ಸೋಂಕು ಪತ್ತೆಯಾಗಿತ್ತು. ಮುಂಜಾಗ್ರತ ಕ್ರಮವಾಗಿ ಆಸ್ಪತ್ರೆ ಯನ್ನು ಸೀಲ್​ಡೌನ್ ಮಾಡಲಾಗಿದೆ.

Belgaum
ಗೋಕಾಕ ಆಸ್ಪತ್ರೆ

By

Published : Jul 19, 2020, 1:41 PM IST

ಬೆಳಗಾವಿ:ಒಂದೇ ದಿನ ಎಂಟು‌ ಜನ ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದ ಹಿನ್ನಲೆ ಗೋಕಾಕ್​ ಪಟ್ಟಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸೀಲ್​ಡೌನ್ ಮಾಡಲಾಗಿದೆ‌.

ಗೋಕಾಕ್ ನಗರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದ ಎಂಟು ಜನ ಗರ್ಭಿಣಿಯರಿಗೆ ನಿನ್ನೆಯಷ್ಟೇ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಹಾಗೂ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರಿಗೂ ಸೋಂಕು ಹರಡುವ ಭೀತಿಯಿಂದ ಸೀಲ್​ಡೌನ್ ಮಾಡಲಾಗಿದೆ.

ಇದಲ್ಲದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸಿದ್ದ ಬಾಣಂತಿಯರು ಸೇರಿ 20ಕ್ಕೂ ಅಧಿಕ ಜನರಿಗೆ ಆರೋಗ್ಯ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ.

ABOUT THE AUTHOR

...view details