ಕರ್ನಾಟಕ

karnataka

ETV Bharat / state

ಕಾಗವಾಡ ತಾಲೂಕಿನಲ್ಲಿ ಇಂದು ಎಂಟು ಕೊರೊನಾ ಪಾಸಿಟಿವ್ ಪ್ರಕರಣ - Coronavirus update

ಕಾಗವಾಡ ತಾಲೂಕಿನಲ್ಲಿ ಎಂಟು ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 32ಕ್ಕೆ ಏರಿಕೆ ಕಂಡಿದೆ.

Coronavirus update
ಕೊರೊನಾ ವೈರಸ್

By

Published : Jul 16, 2020, 5:34 PM IST

ಚಿಕ್ಕೋಡಿ: ಕಾಗವಾಡ ತಾಲೂಕಿನಲ್ಲಿ ಎಂಟು ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 32ಕ್ಕೆ ಏರಿಕೆ ಕಂಡಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಪುಷ್ಪಲತಾ ಮಾಹಿತಿ ನೀಡಿದರು.

ಮೋಳೆ ಗ್ರಾಮದಲ್ಲಿ26 ವರ್ಷದ ಪತಿ ಹಾಗೂ 22 ವರ್ಷದ ಪತ್ನಿ, 34 ವರ್ಷದ ಮಹಿಳೆ (ಬೆಂಗಳೂರು ಸಂಪರ್ಕ), 77 ವರ್ಷದ ವೃದ್ಧೆ ಸೋಂಕಿಗೆ ಒಳಗಾಗಿದ್ದಾರೆ. ವೃದ್ಧೆ ವಾಸವಿರುವ ಮಾಳಿ ಗಲ್ಲಿಯನ್ನು ಸೀಲ್​​ಡೌನ್​​ ಮಾಡಲಾಗಿದೆ.

ಸೀಲ್​ಡೌನ್​​ಗೆ ಒಳಗಾಗಿರುವ ಪ್ರದೇಶ

ಕೌಲಗುಡ್ಡ ಗ್ರಾಮದಲ್ಲಿ 27 ವರ್ಷದ ಮಹಿಳೆಗೆ, ಮಂಗಸೂಳಿ ಗ್ರಾಮದಲ್ಲಿ26 ವರ್ಷದ ಯುವಕನಿಗೆ (ಮಹಾರಾಷ್ಟ್ರದ ನಂಟು) ಹಾಗೂ ಶಿರಗುಪ್ಪಿ ಗ್ರಾಮದಲ್ಲಿ 39 ವರ್ಷದ ಮಹಿಳೆ ಹಾಗೂ ಹಾಗೂ 70 ವರ್ಷದ ವೃದ್ಧನಿಗೆ ಸೋಂಕು ಅಂಟಿದೆ.

ABOUT THE AUTHOR

...view details