ಕರ್ನಾಟಕ

karnataka

ETV Bharat / state

ಬೆಳಗಾವಿ ಉಪಕದನ.. 8 ನಾಮಪತ್ರ ವಾಪಸ್.. ಅಂತಿಮವಾಗಿ ಕಣದಲ್ಲಿ 10 ಅಭ್ಯರ್ಥಿಗಳು - ಬೆಳಗಾವಿ ಜಿಲ್ಲಾಧಿಕಾರಿ

ಲೋಕಸಭೆ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಈ ಹಿನ್ನೆಲೆ 8 ಮಂದಿ ನಾಮಪತ್ರ ವಾಪಸ್‌ ಪಡೆದಿದ್ದಾರೆ..

Harish kumar
ಡಾ.ಕೆ.ಹರೀಶ್ ಕುಮಾರ್

By

Published : Apr 3, 2021, 9:02 PM IST

ಬೆಳಗಾವಿ :ಬೆಳಗಾವಿ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಒಟ್ಟು 18ರಲ್ಲಿ 8 ಅಭ್ಯರ್ಥಿಗಳು ತಮ್ಮ ನಾಮಪತ್ರ ಇಂದು ವಾಪಸ್ ಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ ಹರೀಶ್ ಕುಮಾರ್ ತಿಳಿಸಿದ್ದಾರೆ.

ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾದ ಇಂದು ಶಿವಸೇನೆ ಹಾಗೂ ಸರ್ವ ಜನತಾ ಪಾರ್ಟಿಯ ಅಭ್ಯರ್ಥಿಗಳು ಸೇರಿ ಒಟ್ಟು 8 ಜನ ತಮ್ಮ ಉಮೇದುವಾರಿಕೆ ಹಿಂಪಡೆದರು.

ನಾಮಪತ್ರ ಹಿಂಪಡೆದ ಅಭ್ಯರ್ಥಿಗಳ ವಿವರ :

ಅಶೋಕ್ ಪಾಂಡಪ್ಪ ಹಣಜಿ (ಸರ್ವ ಜನತಾ ಪಾರ್ಟಿ)

ಕೃಷ್ಣಾಜಿ ಪುಂಡಲೀಕ ಪಾಟೀಲ (ಶಿವಸೇನೆ)

ಹನುಮಂತ ನಾಗನೂರ ಶಿವಪ್ಪ, ಬಸವರಾಜ ಹುದ್ದಾರ್, ಸುರೇಶ್ ಬಸವಂತಪ್ಪ ಪರಗನ್ನವರ, ಸಂಗಮೇಶ್ ಚಿಕ್ಕನರಗುಂದ, ಭಾರತಿ ಚಿಕ್ಕನರಗುಂದ, ಗುರುಪುತ್ರ ಕೆಂಪಣ್ಣ ಕುಳ್ಳೂರ (ಎಲ್ಲರೂ ಪಕ್ಷೇತರ ಅಭ್ಯರ್ಥಿಗಳು) ಇವರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.

ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ವಿವರ :ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿ 10 ಅಭ್ಯರ್ಥಿಗಳಿದ್ದಾರೆ. ಆ ಪೈಕಿ ಮಂಗಳಾ ಸುರೇಶ್ ಅಂಗಡಿ (ಭಾರತೀಯ ಜನತಾ ಪಾರ್ಟಿ), ಸತೀಶ್ ಲಕ್ಷಣರಾವ್ ಜಾರಕಿಹೊಳಿ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ವಿವೇಕಾನಂದ ಬಾಬು ಘಂಟಿ (ಕರ್ನಾಟಕ ರಾಷ್ಟ್ರಸಮಿತಿ), ಶ್ರೀ ವೆಂಕಟೇಶ್ವರ ಮಹಾ ಸ್ವಾಮೀಜಿ (ಹಿಂದೂಸ್ಥಾನ ಜನತಾ ಪಾರ್ಟಿ), ಮರಲಿಂಗಣ್ಣವರ ಸುರೇಶ್ ಬಸಪ್ಪಾ(ಕರ್ನಾಟಕ ಕಾರ್ಮಿಕರ ಪಕ್ಷ) ಇನ್ನುಳಿದಂತೆ ಅಪ್ಪಾಸಾಹೇಬ ಶ್ರೀಪತಿ ಕುರಣೆ, ಗೌತಮ್ ಯಮನಪ್ಪ ಕಾಂಬಳೆ, ನಾಗಪ್ಪ ಕಳಸನ್ನವರ, ಶುಭಂ ವಿಕ್ರಾಂತ ಶೆಳಕೆ, ಶ್ರೀಕಾಂತ ಪಡಸಲಗಿ (ಎಲ್ಲರೂ ಪಕ್ಷೇತರರು)ಅಂತಿಮವಾಗಿ ಕಣದಲಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details