ಕರ್ನಾಟಕ

karnataka

ETV Bharat / state

ಒಂದೇ ದಿನ 17 ಜನರಲ್ಲಿ ಸೋಂಕು: ಬೆಳಗಾವಿಯಲ್ಲಿ ಮೆಡಿಕಲ್, ಹಾಲಿನಂಗಡಿ ಮಾತ್ರ ಓಪನ್ - ಮೆಡಿಕಲ್, ಹಾಲಿನಂಗಡಿ ಮಾತ್ರ ಓಪನ್

ಒಂದೇ ದಿನದಲ್ಲಿ 17 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪೀಡಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಹೀಗಾಗಿ ಕುಂದಾನಗರಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇಂದಿನಿಂದ ಮೂರು ದಿನ ಹಾಲು, ಮೆಡಿಕಲ್ ಮಾತ್ರ ಓಪನ್‌ ಇರಲಿವೆ. ಉಳಿದ ತರಕಾರಿ ಹಾಗೂ ದಿನಸಿ ಅಂಗಡಿಗಳು ಲಾಕ್ ಆಗಿರಲಿವೆ ಎಂದು ಪೊಲೀಸರು ನಗರದ ಎಲ್ಲ ಕಡೆ ಮೈಕ್ ಅಲ್ಲಿ ಅನೌನ್ಸ್ ಮಾಡುತ್ತಿದ್ದಾರೆ.

7 News corona positive case reported in Belagavi today7 News corona positive case reported in Belagavi today
ಒಂದೇ ದಿನದಲ್ಲಿ 17 ಜನರಲ್ಲಿ ಸೋಂಕು: ಬೆಳಗಾವಿಯಲ್ಲಿ ನಾಳೆಯಿಂದ ಮೆಡಿಕಲ್, ಹಾಲಿನಂಗಡಿ ಮಾತ್ರ ಓಪನ್

By

Published : Apr 16, 2020, 11:27 PM IST

ಬೆಳಗಾವಿ:ಒಂದೇ ದಿನದಲ್ಲಿ 17 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪೀಡಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ಹೀಗಾಗಿ ಕುಂದಾನಗರಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇಂದಿನಿಂದ ಮೂರು ದಿನ ಹಾಲು, ಮೆಡಿಕಲ್ ಮಾತ್ರ ಓಪನ್‌ ಇರಲಿವೆ. ಉಳಿದ ತರಕಾರಿ ಹಾಗೂ ದಿನಸಿ ಅಂಗಡಿಗಳು ಲಾಕ್ ಆಗಿರಲಿವೆ ಎಂದು ಪೊಲೀಸರು ನಗರದ ಎಲ್ಲ ಕಡೆ ಮೈಕ್ ಅಲ್ಲಿ ಅನೌನ್ಸ್ ಮಾಡುತ್ತಿದ್ದಾರೆ. ತರಕಾರಿ, ದಿನಸಿ ವಸ್ತು ಸಿಗಲ್ಲ, ಅನಗತ್ಯವಾಗಿ ಹೊರಬರದಂತೆ ಜನರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಪೊಲೀಸರ ಮನವಿ ಉಲ್ಲಂಘಿಸಿ ಅನಗತ್ಯ ರಸ್ತೆಗಿಳಿದ್ರೆ ಲಾಠಿರುಚಿ ಸವಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ರವಾನೆ ಮಾಡಲಾಗಿದೆ.


ಬೆಳಗಾವಿ ನಗರದ ಶಹಾಪುರ, ವಿನಾಯಕ ನಗರ ಸೇರಿದಂತೆ ಬಹುತೇಕ ಬಡಾವಣೆ, ಬೀದಿಗಳಲ್ಲಿ ಪೊಲೀಸರು ಪ್ರಚಾರ ಮಾಡುತ್ತಿದ್ದು ಮನೆಯಿಂದ ಯಾರು ಹೊರಬಾರದಂತೆ ಸೂಚಿಸಲಾಗಿದೆ.

ABOUT THE AUTHOR

...view details