ಕರ್ನಾಟಕ

karnataka

ETV Bharat / state

64 ಕೆ.ಜಿ ಹಸಿ ಗಾಂಜಾ ವಶ: ಇಬ್ಬರ ಬಂಧನ - ಬೆಳಗಾವಿ ಸಿಇಎನ್ ಠಾಣೆ ಪೋಲಿಸರು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ಗಾಂಜಾ ಗಿಡಗಳನ್ನು ಹೊಲದಲ್ಲಿ ಬೆಳಸಿದ್ದ ಇಬ್ಬರನ್ನು ಬೆಳಗಾವಿ ಸಿಇಎನ್ ಠಾಣೆ ಪೊಲೀಸರು ಬಂಧಿಸಿ ಅವರಿಂದ ಭಾರಿ ಮೌಲ್ಯದ ಗಾಂಜಾ ಸಸಿಗಳನ್ನು ವಶಪಡಿಸಿಕೊಂಡಿದ್ದಾರೆ.

64 ಕೆ.ಜಿ ಹಸಿ ಗಾಂಜಾ ವಶ: ಇಬ್ಬರ ಬಂಧನ

By

Published : Sep 20, 2019, 1:05 PM IST

ಚಿಕ್ಕೋಡಿ:ಗಾಂಜಾ ಗಿಡಗಳನ್ನು ಹೊಲದಲ್ಲಿ ಬೆಳಸಿದ್ದ ಇಬ್ಬರನ್ನು ಬೆಳಗಾವಿ ಸಿಇಎನ್ ಠಾಣೆ ಪೋಲಿಸರು ಬಂಧಿಸಿ ಅವರಿಂದ ಭಾರಿ ಮೌಲ್ಯದ ಗಾಂಜಾ ಸಸಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಶ್ರೀಕಾಂತ ಪಂಡಿತ ಪವಾರ ಹಾಗೂ ಪರಸಪ್ಪ ಉಲ್ಲಪ್ಪ ಹಳಬರ ಬಂಧಿತ ಆರೋಪಿಗಳು. ಮುಸುಕಿನ ಜೋಳದ ಜೊತೆ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವುದನ್ನ ಖಚಿತ ಪಡಿಸಿಕೊಂಡ ಪೊಲೀಸರು‌ ದಾಳಿ ನಡೆಸಿ ಅವರಿಂದ 1.29 ಲಕ್ಷ ಮೌಲ್ಯದ 64 ಕೆ.ಜಿ 600 ಗ್ರಾಂ. ಹಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ರಾಯಬಾಗ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details