ಅಥಣಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ 36ನೇ ವೇದಾಂತ ಪರಿಷತ್ ನಿಮಿತ್ತವಾಗಿ 5ನೇ ಬಾರಿಗೆ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮೀಜಿ ದ್ವೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀಗಳು ಮಾತನಾಡಿ, ಮನುಷ್ಯನ ಶರೀರ ಆರೋಗ್ಯವಾಗಿ ಇರಬೇಕು ಎಂದರೆ ಕ್ರೀಡೆ ಬಹಳ ಮುಖ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡೆಯನ್ನು ಅಳವಡಿಸಿಕೊಂಡರೆ ಅವರ ಜೀವನ ಬಹಳ ಸುಂದರವಾಗಿರುತ್ತದೆ. ಮನುಷ್ಯನಿಗೆ ಎಲ್ಲ ಸಿರಿ ಸಂಪತ್ತುಗಳಿಗಿಂತಲೂ ಶರೀರ ಸಂಪತ್ತು ತುಂಬಾ ಮುಖ್ಯ ಅದನ್ನು ಚನ್ನಾಗಿ ಕಾಪಾಡಿಕೊಂಡು ಹೋಗಬೇಕು ಎಂದು ಶ್ರೀಗಳು ಹೇಳಿದರು.
ಮುಕ್ತ ಹೊನಲು ಬೆಳಕಿನ ಕಬಡ್ಡಿಗೆ ಚಾಲನೆ ಈ ಕ್ರೀಡಾ ಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದಂತ (ಪ್ರೊ) ಕ್ರೀಡಾ ಪಟುಗಳು ಭಾಗವಹಿಸಿದ್ದರು. ಹೊರ ರಾಜ್ಯಗಳಿಂದ ಆಗಮಿಸಿರುವ10 ತಂಡಗಳು ಭಾಗಿಯಾಗಿದ್ದವು. ಒಟ್ಟು 24 ತಂಡಗಳು ಪಾಲ್ಗೊಂಡಿದ್ದವು.
ಇನ್ನು ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು
- ಮಲ್ಲಿಕಾರ್ಜುನ ಬಾಲದಿಂಡಿ dysp. ಹಾವೇರಿ
- ಕುಮಾರ ಹಿತ್ತಲಮಣಿ psi ಹಾರುಗೇರಿ ಪೊಲೀಸ್ ಠಾಣೆ
- ಭೀಮ ಸಾತನವರ್ psi ಹುಬ್ಬಳ್ಳಿ ಶಹರ ಠಾಣೆ
- ಸಿದ್ದು ಹುಲ್ಲೋಳಿ( ac) ಜಮಖಂಡಿ
- ಪ್ರಭಾಕರ್ ಧರ್ಮಟ್ಟಿ Psi ಬಾಗಲಕೋಟೆ
- ಶಶಿಕಾಂತ ಕಾಂಬಳೆ(ವರ್ಮಾ) ಲೋಕಾಯುಕ್ತ Cpi ಬಾಗಲಕೋಟೆ
- ಕುಮಾರ್ ಹಾಡಕರ್ Psi. ಇಳಕಲ್