ಬೆಳಗಾವಿ: ಜಿಲ್ಲೆಯಲ್ಲಿ ಇಂದು ಐವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 263ಕ್ಕೆ ಏರಿಕೆಯಾಗಿದೆ.
ಐವರಿಗೆ ಕೊರೊನಾ ಸೋಂಕು.. ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ 263ಕ್ಕೆ ಏರಿಕೆ - ಬೆಳಗಾವಿ ಕೊರೊನಾ ನ್ಯೂಸ್
ಐವರಲ್ಲಿ ಸೋಂಕಿತರಲ್ಲಿ ಇಬ್ಬರು ಗುಜರಾತ್ ಮತ್ತು ಮೂವರು ಮಹಾರಾಷ್ಟ್ರದಿಂದ ಹಿಂದಿರುಗಿದವರು.

Belagavi corona news
ಮಹಾಮಾರಿ ಕೊರೊನಾ ಪ್ರಕರಣ ದಿನೇದಿನೆ ಹೆಚ್ಚುತ್ತಲೇ ಇದೆ. 8 ವರ್ಷದ ಬಾಲಕಿ, 10 ವರ್ಷದ ಬಾಲಕ ಸೇರಿ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಐವರು ಸೋಂಕಿತರ ಪೈಕಿ ಮೂವರು ಮಹಾರಾಷ್ಟ್ರದಿಂದ ಹಿಂದಿರುಗಿದವರು. ಇಬ್ಬರು ಗುಜರಾತ್‌ನಿಂದ ವಾಪಸಾದವರು ಎಂದು ತಿಳಿದು ಬಂದಿದೆ. ಸದ್ಯ ಜಿಲ್ಲೆಯಲ್ಲಿ 138 ಕೊರೊನಾ ಸಕ್ರಿಯ ಪ್ರಕರಣಗಳಿವೆ.