ಬೆಳಗಾವಿ:ಪ್ರೀತಿಸಿದಕ್ಕೆ ಯುವಕನ ಕೊಲೆ ಮಾಡಿ 10 ಜನ ಹಂತಕರನ್ನು ಖಾನಾಪುರ ಪ್ರಧಾನ ಸಿವಿಲ್ ಅಂಡ್ ಜೆಎಂಎಫ್ಸಿ ಕೋರ್ಟ್‌ಗೆ ಹಾಜರುಪಡಿಸಲಾಯಿತು. 10 ಆರೋಪಿಗಳ ಪೈಕಿ ಐವರನ್ನು ಪೊಲೀಸ್ ಕಸ್ಟಡಿಗೆ ಹಾಗೂ ಮತ್ತೆ ಐವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶ ಸೂರ್ಯನಾರಾಯಣ ಆದೇಶ ಹೊರಡಿಸಿದರು.
ಆರೋಪಿಗಳಾದ ಪುಂಡಲೀಕ ಮುತಗೇಕರ, ಶೈಲಾ ಕುಂಬಾರ, ಕುತುಬುದ್ದೀನ್ ಬೇಪಾರಿ, ಗಣಪತಿ ಗೋಂದಳಿ, ಮಂಜುನಾಥ ಗೋಂದಳಿಯನ್ನು ಪೊಲೀಸರು ಕಸ್ಟಡಿಗೆ ಪಡೆದರು. ಮಾರುತಿ ಗೋಂದಳಿ, ಈರಪ್ಪ ಕುಂಬಾರ, ಪ್ರವೀಣ ಪೂಜೇರಿ, ಶ್ರೀಧರ ಡೋಣಿ, ಪ್ರಶಾಂತ ಪಾಟೀಲನನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ವೆಹಿಕಲ್ ಬ್ರೋಕರ್ ಆಗಿದ್ದ ಅರ್ಬಾಜ್ ಮುಲ್ಲಾ ಕೊಲೆ ಪ್ರಕರಣದಲ್ಲಿ ಖಾನಾಪುರ ಠಾಣೆ ಪೊಲೀಸರು 10 ಜನರನ್ನು ವಶಕ್ಕೆ ಪಡೆದಿದ್ದರು. ಇಂದು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಸರ್ಕಾರದ ಪರ ಸಹಾಯಕ ಅಭಿಯೋಜಕಿ ಆಫೀಯಾ ನೇಸರಿಕರ ವಕಾಲತ್ತು ವಹಿಸಿದ್ದರು.
ಅರ್ಬಾಜ್ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದನು. ಇದಕ್ಕೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಇಬ್ಬರು ಪ್ರೀತಿಸುವುದನ್ನು ಮುಂದುವರೆಸಿದ್ದರು. ಮದುವೆಗೂ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಯುವತಿಯ ತಂದೆ ಸುಪಾರಿ ನೀಡಿ ಅರ್ಬಾಜ್ ಮುಲ್ಲಾ ಎಂಬಾತನನ್ನು ಖಾನಾಪುರ ಹೊರವಲಯದಲ್ಲಿ ಸೆ. 28 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮೃತದೇಹವನ್ನು ಖಾನಾಪುರ ರೈಲ್ವೆ ಹಳಿ ಮೇಲೆ ಬಿಸಾಕಿ ಹಂತಕರು ಪರಾರಿಯಾಗಿದ್ದರು.
ಓದಿ:ಬೆಳಗಾವಿ ಯುವಕನ ಕೊಲೆಗೈದ 10 ಆರೋಪಿಗಳ ಬಂಧನ.. ಮಗಳನ್ನ ಪ್ರೀತಿಸಿದ್ದಕ್ಕೆ ಸುಪಾರಿ ಕೊಟ್ಟ ತಂದೆ..