ಬೆಳಗಾವಿ: ಮುಂಬರುವ ಬೆಳಗಾವಿ ಲೋಕಸಭೆ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಅಕ್ರಮ ಮದ್ಯ ಸಂಗ್ರಹಿಸಿದ್ದರೆನ್ನಲಾದ ವ್ಯಕ್ತಿಯ ಮನೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿದ್ದಾರೆ.
ದುಬಾರಿ ಬೆಲೆಗೆ ಮಾರಲು ಅಕ್ರಮ ಮದ್ಯ ಸಂಗ್ರಹ: ಬೆಳಗಾವಿ ಪೊಲೀಸರಿಂದ 436 ಮದ್ಯದ ಬಾಟಲಿ ಸೀಜ್ - Belgaum Police
ಬೆಳಗಾವಿ ಲೋಕಸಭೆ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಸಂಗ್ರಹಿಸಿಟ್ಟಿದ್ದರೆನ್ನಲಾದ 436 ಬಾಟಲಿ ಅಕ್ರಮ ಮದ್ಯವನ್ನು ಬೆಳಗಾವಿ ಪೊಲೀಸರು ಸೀಜ್ ಮಾಡಿದ್ದಾರೆ.
ತಾಲೂಕಿನ ಬಾದರವಾಡಿ ಗ್ರಾಮದ ಬ್ರಹ್ಮಲಿಂಗ ಗಲ್ಲಿಯಲ್ಲಿರುವ ಲಕ್ಷ್ಮಣ ಪಾಟೀಲ ಬಂಧಿತ ಆರೋಪಿ. ಬಂಧಿತನಿಂದ 436 ಮದ್ಯದ ಬಾಟಲಿ, 7850 ನಗದು ಹಾಗೂ ಮೂರು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಗೋವಾದಿಂದ ಅಕ್ರಮವಾಗಿ ಮದ್ಯ ತಂದು ಆರೋಪಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ. ಲೋಕಸಭೆ ಉಪಚುನಾವಣೆಯಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡಲು ಆರೋಪಿ ನಿರ್ಧರಿಸಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಮದ್ಯ ವಶಪಡಿಸಿಕೊಂಡಿದ್ದಾರೆ.
ನಿನ್ನೆಯೂ ದಾಳಿ ಗೋವಾ ಹಾಗೂ ಆರ್ಮಿ ಕ್ಯಾಂಟಿನ್ನ ಮದ್ಯ ಸಂಗ್ರಹಿಸಿಟ್ಟು, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಸಿಸಿಐಬಿ ತಂಡ ಬಂಧಿಸಿತ್ತು. ಕುಮಾರಸ್ವಾಮಿ ಲೇಔಟ್ನ ರಾಜೇಶ್ ನಾಯಕ ಹಾಗೂ ಕಣಬರ್ಗಿಯ ಶಂಕರ ದೇಸನೂರ ಬಂಧಿತರು. ಬಂಧಿತರಿಂದ 12 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ ಮದ್ಯದ ಬಾಟಲಿ ವಶಪಡಿಸಿಕೊಳ್ಳಲಾಗಿತ್ತು. ಕಡಿಮೆ ಹಣಕ್ಕೆ ಮದ್ಯ ಖರೀದಿಸಿ ದುಬಾರಿ ಬೆಲೆಗೆ ಆರೋಪಿತರು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.