ಕರ್ನಾಟಕ

karnataka

ETV Bharat / state

ಶ್ರೀಮಂತರು ಬಿಪಿಎಲ್​​ ಕಾರ್ಡ್​ ಪಡೆದಿದ್ದಾರೆಯೇ...? ಮಾಹಿತಿ ನೀಡಿ ಬಹುಮಾನ ಗೆಲ್ಲಿ - ಶ್ರೀಮಂತರು ಪಡೆದಿರುವ

ಬಿಪಿಎಲ್​​ ಕಾರ್ಡ್​ಅನ್ನು ಶ್ರೀಮಂತರು ಪಡೆದಿರುವ ಬಗ್ಗೆ ಮಾಹಿತಿ ನೀಡಿದರೆ 400 ರೂ. ಬಹುಮಾನ ಗೆಲ್ಲಬಹುದು.

ಬಹುಮಾನ ಪಡೆಯಿರಿ

By

Published : Sep 19, 2019, 12:48 PM IST

ಅಥಣಿ:ಬಡವರಿಗಾಗಿ ನೀಡಲಾಗುವ ಬಿಪಿಎಲ್​​ ಕಾರ್ಡ್​​ಗಳನ್ನು ಶ್ರೀಮಂತರು ಕೂಡ ಅಕ್ರಮವಾಗಿ ಪಡೆಯುತ್ತಿರುವುದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಅಂಥವರ ಮಾಹಿತಿ ನೀಡಿದವರಿಗೆ 400 ರೂ. ಬಹುಮಾನ ನೀಡುವುದಾಗಿ ಇಲಾಖೆ ತಿಳಿಸಿದೆ.

ಆದಾಯ ತೆರಿಗೆ ಪಾವತಿಸುತ್ತಿರುವವರು, ಸರ್ಕಾರಿ ನೌಕರರು, ಸಹಕಾರ ಸಂಘಗಳ ಕಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮುಂತಾದ ಆರ್ಥಿಕಾಗಿ ಸದೃಢವಾಗಿರುವವರು ಬಿಪಿಎಲ್​ ಕಾರ್ಡ್​ ಪಡೆದಿದ್ದರೆ ಕೂಡಲೇ 1967 ಅಥವಾ 18004259339 ನಂಬರ್​ಗೆ ಕರೆ ಮಾಡಿ ತಿಳಿಸಬಹುದು.

ಶ್ರೀಮಂತರು ಬಿಪಿಎಲ್​ ಕಾರ್ಡ್ ಪಡೆದಿದ್ದರೆ ಅದನ್ನು ಮರಳಿಸಲು ಸೆ. 30 ಕಡೆ ದಿನವಾಗಿರುತ್ತದೆ. ಗಡುವಿನೊಳಗೆ ವಾಪಾಸ್ ನೀಡಿದಿದ್ದರೆ ಪಡಿತರ ಚೀಟಿ ಕಾಯ್ದೆ 1977ರ ಅನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರ ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ.

ABOUT THE AUTHOR

...view details