ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಕಲುಷಿತ ನೀರು ಸೇವಿಸಿ 40 ಜನ‌ ಅಸ್ವಸ್ಥ: ವೃದ್ಧ ಸಾವು

ಬೆಳಗಾವಿ ಜಿಲ್ಲೆಯ ಬೆನ್ನೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರಿಗೆ ವಾಂತಿ ಭೇದಿ ಪ್ರಾರಂಭವಾಗಿದೆ. ಅಸ್ವಸ್ಥರಾಗಿದ್ದ 40 ಜನರಲ್ಲಿ, ಒಬ್ಬ ವೃದ್ಧ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

By

Published : Aug 3, 2022, 9:07 AM IST

Belgaum
ವೃದ್ಧ ಸಾವು

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಪಂಚಾಯತ್​ ವ್ಯಾಪ್ತಿಯ ಬೆನ್ನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ 40 ಜನರ ಪೈಕಿ ಚಿಕಿತ್ಸೆ ಫಲಕಾರಿಯಾದೇ ವೃದ್ಧರೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕಲುಷಿತ ನೀರು ಸೇವಿಸಿ ಬೆನ್ನೂರ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಅವರನ್ನು ರಾಮದುರ್ಗ ‌ಸರ್ಕಾರಿ ಆಸ್ಪತ್ರೆಗೆ ‌ದಾಖಲಿಸಿ ಚಿಕಿತ್ಸೆ ‌ಕೊಡಿಸಲಾಗುತ್ತಿತ್ತು. ಆದರೆ, ಕಳೆದ ರಾತ್ರಿ ಚಿಕಿತ್ಸೆ ಫಲಿಸದೇ ಬೆನ್ನೂರ ಗ್ರಾಮದ ಬಸಪ್ಪ ಖಾನಾಪೂರ (85)‌ಎಂಬುವರು ಸಾವನ್ನಪ್ಪಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರೆದಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ವೃದ್ಧನ ಸಾವಿಗೆ ಗ್ರಾಮ ಪಂಚಾಯತ್​ ಅಧಿಕಾರಿಗಳು ಹಾಗೂ ಜೆಜಿಎಂ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ದಿವ್ಯ ನಿರ್ಲಕ್ಷ್ಯವೇ ಕಾರಣ ‌ಎಂಬ ಆರೋಪ ಕೇಳಿ ಬಂದಿದ್ದು, ಮೃತರ ಕುಟುಂಬಕ್ಕೆ ಸರ್ಕಾರ‌ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಸುಳ್ಯ: ಮುಸ್ಲಿಂ ಯುವಕನನ್ನು ನದಿಗೆ ಹಾರಿ ರಕ್ಷಿಸಿದ ಹಿಂದೂ ಯುವಕ

ABOUT THE AUTHOR

...view details