ಬೆಳಗಾವಿ:ಗಾಂಜಾ ಪ್ರಕರಣದಲ್ಲಿ ಸೀಜ್ ಮಾಡಲಾಗಿದ್ದ 366 ಕೆಜಿ ಗಾಂಜಾವನ್ನು ಕೋರ್ಟ್ ಅನುಮತಿ ಮೇರೆಗೆ ಸುಟ್ಟು ಹಾಕಲಾಗಿದೆ ಎಂದು ಡಿಸಿಪಿ ಡಾ. ವಿಕ್ರಮ ಆಮಟೆ ತಿಳಿಸಿದರು.
366 ಕೆಜಿ ಗಾಂಜಾ ನಾಶ ಮಾಡಿದ ಬೆಳಗಾವಿ ಪೊಲೀಸರು
ಗಾಂಜಾ ಕೇಸ್ಗಳಿಗೆ ಸಂಬಂಧಿಸಿದಂತೆ ಎರಡು ವರ್ಷಗಳಲ್ಲಿ 77 ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗಿತ್ತು. ಅದರಂತೆ ನ್ಯಾಯಾಲಯದ ಅನುಮತಿ ಮೇರೆಗೆ ಎಲ್ಲ ರೀತಿಯ ನಿಯಮಗಳ ಅನುಸಾರವಾಗಿ ಪರಿಸರ ಇಲಾಖೆ ಅನುಮತಿಯನ್ನೂ ಪಡೆದುಕೊಳ್ಳಲಾಗಿದ್ದು, ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಜಾನಟ್ಟಿ ಗ್ರಾಮದಲ್ಲಿ ಸಂಗ್ರಹಿಸಿದ ಗಾಂಜಾವನ್ನ ಸುಟ್ಟುಹಾಕಲಾಗಿದೆ.
ನಗರದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ದಾಖಲಾಗಿದ್ದ 77 ಗಾಂಜಾ ಪ್ರಕರಣಗಳಲ್ಲಿ ಸಂಗ್ರಹಿಸಿದ 366 ಕೆಜಿ ಗಾಂಜಾವನ್ನು ಕಾಕತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗುಂಜಾನಟ್ಟಿ ಗ್ರಾಮದಲ್ಲಿ ನಾಶಪಡಿಸಲಾಗಿದೆ.
ಗಾಂಜಾ ಕೇಸ್ ಸಂಬಂಧಿಸಿದಂತೆ ಎರಡು ವರ್ಷಗಳಲ್ಲಿ 77 ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗಿತ್ತು. ಅದರಂತೆ ನ್ಯಾಯಾಲಯದ ಅನುಮತಿ ಮೇರೆಗೆ ಎಲ್ಲ ರೀತಿಯ ನಿಯಮಗಳ ಅನುಸಾರವಾಗಿ ಪರಿಸರ ಇಲಾಖೆ ಅನುಮತಿಯನ್ನೂ ಪಡೆದುಕೊಳ್ಳಲಾಗಿದ್ದು, ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಜಾನಟ್ಟಿ ಗ್ರಾಮದಲ್ಲಿ ಸಂಗ್ರಹಿಸಿದ ಗಾಂಜಾವನ್ನ ಸುಟ್ಟುಹಾಕಲಾಗಿದೆ ಎಂದರು. ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್ ಅವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಡಿಸಿಪಿ ಡಾ. ವಿಕ್ರಮ ಆಮಟೆ ಮತ್ತವರ ತಂಡದವರು ಭಾಗಿಯಾಗಿದ್ದರು.