ಬೆಳಗಾವಿ:ರಾಜಸ್ಥಾನದಅಜ್ಮೀರ್‌ಗೆ ತೆರಳಿ ರಾಜ್ಯಕ್ಕೆ ಮರಳಿದ 38 ಯಾತ್ರಾರ್ಥಿಗಳ ಪೈಕಿ 30 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರೂ ಪುಣೆ-ಬೆಂಗಳೂರು ಎನ್‌ಎಚ್-4 ಮಾರ್ಗವಾಗಿ ಕರ್ನಾಟಕದ ಗಡಿ ಪ್ರವೇಶಿಸಿದ್ದರು.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿಯ ಚೆಕ್ ಪೋಸ್ಟ್‌ಗೆ ಮೇ 2 ರ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ್ದ ಇವರು ಬರೋಬ್ಬರಿ 8 ಗಂಟೆಗಳ ಕಾಲ ಅದೇ ಚೇಕ್ ಪೋಸ್ಟ್ ಬಳಿ ನಿಂತಿದ್ದರಂತೆ. ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡುತ್ತಾ ಕಾಲಹರಣ ಮಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಸಮಯದಲ್ಲಿ ಇವರು ಪೊಲೀಸರು ಹಾಗೂ ವಾಹನ ಸವಾರರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಗಳಿವೆ.