ಚಿಕ್ಕೋಡಿ (ಬೆಳಗಾವಿ): ಬೆಳ್ಳಿಯ ಆಭರಣಗಳನ್ನು ಕೊರಿಯರ್ ಮೂಲಕ ಸಾಗಾಟ ಮಾಡುವಾಗ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 47 ಕೆ.ಜಿ 990 ಗ್ರಾಂನ ಅಂದಾಜು 14,39,670 ರೂಪಾಯಿ ಬೆಲೆಯ ಆಭರಣಗಳನ್ನು ಯಮಕನಮರಡಿ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಚಿಕ್ಕೋಡಿ: ಅಕ್ರಮವಾಗಿ 47ಕೆ.ಜಿ ಬೆಳ್ಳಿ ಸಾಗಿಸುತ್ತಿದ್ದ ಮೂವರು ಪೊಲೀಸರ ವಶಕ್ಕೆ - ಮಹಾರಾಷ್ಟ್ರದ ಕೊಲ್ಲಾಪುರ
47 ಕೆ.ಜಿ ಬೆಳ್ಳಿಯನ್ನು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಕಡೆಯಿಂದ ಬೆಳಗಾವಿಗೆ ತೆರಳುವಾಗ ಎನ್ಎಚ್ - 4 ರಸ್ತೆಯಲ್ಲಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ನಾಕಾ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.
ಚಿಕ್ಕೋಡಿ: ಅಕ್ರಮವಾಗಿ 47ಕೆ.ಜಿ ಬೆಳ್ಳಿ ಸಾಗಿಸುತ್ತಿದ್ದ ಮೂವರು ಪೊಲೀಸರ ವಶಕ್ಕೆ
ಆರೋಪಿಗಳು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕೆರಲೆ ಗ್ರಾಮದ ಸುಹಾಸ ಬಾಸ್ಕರ ಗಾಯಕವಾಡ (45), ಅದೇ ಗ್ರಾಮದ ಸಂದೀಪ ಸುಹಾಸ ಗಾಯಕವಾಡ (38) ಹಾಗೂ ಬೆಳಗಾವಿ ಜಿಲ್ಲೆಯ ಹಿಂಡಲಗಾದ ಗೋಕುಲ ನಗರ ನಿವಾಸಿ ಮಾರುತಿ ಅಮೃತ ಮುತಗೆಕರ (38) ಎಂದು ಗುರುತಿಸಲಾಗಿದೆ.
ಇವರು ಮಹಾರಾಷ್ಟ್ರದ ಕೊಲ್ಲಾಪುರ ಕಡೆಯಿಂದ ಬೆಳಗಾವಿಗೆ ತೆರಳುವಾಗ ಎನ್ಎಚ್ - 4 ರಸ್ತೆಯಲ್ಲಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ನಾಕಾ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.