ಬೆಳಗಾವಿ: ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಬೀಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಬೆಳಗಾವಿಯಲ್ಲಿ ಇಂದು ಮೂವರು ಸೋಂಕಿತರು ಗುಣಮುಖ.. - Belgavi latest corona update
ಬೆಳಗಾವಿಯಲ್ಲಿ ಇಂದು ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಉಳಿದಂತೆ 26 ಸಕ್ರೀಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.
![ಬೆಳಗಾವಿಯಲ್ಲಿ ಇಂದು ಮೂವರು ಸೋಂಕಿತರು ಗುಣಮುಖ.. Belgavi](https://etvbharatimages.akamaized.net/etvbharat/prod-images/768-512-7713854-1083-7713854-1592748743228.jpg)
ಬೆಳಗಾವಿಯಲ್ಲಿ ಇಂದು ಮೂವರು ಸೋಂಕಿತರು ಗುಣಮುಖ
ಬೈಲಹೊಂಗಲ ತಾಲೂಕಿನ ತುರಮರಿ, ಬೆಳಗಾವಿಯ ಅಗಸಗಾ ಹಾಗೂ ಅಲತಗಾ ಗ್ರಾಮದ ಸೋಂಕಿತರು ಗುಣಮುಖರಾದವರು. ಇನ್ನು ಜಿಲ್ಲೆಯಲ್ಲಿ ಈವರೆಗೆ 309 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದವು. ಆ ಪೈಕಿ 282 ಮಂದಿ ಗುಣಮುಖರಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಉಳಿದಂತೆ 26 ಸಕ್ರೀಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.