ಚಿಕ್ಕೋಡಿ :ಕೋವಿಡ್ ನಿಯಮ ಉಲಂಘಿಸಿ ಮದುವೆ ಸಮಾರಂಭದಲ್ಲಿ ಹೆಚ್ಚಿನ ಜನರನ್ನು ಸೇರಿಸಿದವರಿಗೆ ಪಿಡಿಒ ದಂಡ ವಿಧಿಸುವ ಮೂಲಕ ತಕ್ಕ ಪಾಠ ಕಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಕಮತನೂರ ಗ್ರಾಮದ ಕಾಶಿನಾಥ ಖಾಡೆ ಎಂಬುವರ ಮದುವೆ ಮಹಾರಾಷ್ಟ್ರ ಮೂಲದ ವಧುವಿನ ಜೊತೆ ಏರ್ಪಡಾಗಿತ್ತು. ಸುಮಾರು 500ಕ್ಕೂ ಹೆಚ್ಚು ಜನರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಕೋವಿಡ್-19 ನಿಯಮ ಮೀರಿದಕ್ಕಾಗಿ ₹25 ಸಾವಿರ ದಂಡ ಮದುವೆಗೆ ಸರ್ಕಾರ ಕೊರೊನಾ ನಿಯಮ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾದ ಮಾಹಿತಿ ತಿಳಿದು ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಮಹೇಶ್ ಯಡವನ್ನವರ ನೇತೃತ್ವದಲ್ಲಿ ದಾಳಿ ನಡೆಸಲಾಯ್ತು.
ವರ ಕಾಶಿನಾಥ ಖಾಡೆ ಅವರಿಗೆ 25 ಸಾವಿರ ದಂಡ ವಿಧಿಸುವ ಮೂಲಕ ಕೊವೀಡ್ ನಿಯಮ ಪಾಲಿಸದವರಿಗೆ ಎಚ್ಚರಿಕೆ ನೀಡಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.