ಬೆಳಗಾವಿ:ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 24 ಸೋಂಕಿತರು ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ.
ಗೋಕಾಕ ತಾಲೂಕಿನ ಎಂಟು ಜನರು, ಹುಕ್ಕೇರಿಯ ಇಬ್ಬರು, ರಾಯಭಾಗದ ನಾಲ್ವರು, ಅಥಣಿಯ ಮೂವರು, ಖಾನಾಪುರದ ನಾಲ್ವರು ಹಾಗೂ ಬೆಳಗಾವಿಯ ಇಬ್ಬರು, ಬೈಲಹೊಂಗಲದ ಓರ್ವ ಮೃತಪಟ್ಟಿದ್ದಾರೆ. ಈ ಎಲ್ಲರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.