ಚಿಕ್ಕೋಡಿ : ಕೊರೊನಾ ಮಹಾಮಾರಿ ಎರಡನೇ ಅಲೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಲ್ಲಿ 22 ಜನ ಶಿಕ್ಷಕರು ಬಲಿಯಾಗಿದ್ದಾರೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಕೊರೊನಾ ಎರಡನೇ ಅಲೆ, ಚಿಕ್ಕೋಡಿಯಲ್ಲಿ 22 ಶಿಕ್ಷಕರು ಬಲಿ - ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿ
ಈ ಪೈಕಿ 18 ಜನ ಸರ್ಕಾರಿ ಮತ್ತು ನಾಲ್ವರು ಅನುದಾನಿತ ಶಾಲೆಯ ಶಿಕ್ಷಕರಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಈವರೆಗೆ ಕೊರೊನಾಗೆ ಒಟ್ಟು 40 ಜನ ಶಿಕ್ಷಕರು ಬಲಿಯಾದಂತಾಗಿದೆ..
ಚಿಕ್ಕೋಡಿಯಲ್ಲಿ 22 ಶಿಕ್ಷಕರು ಬಲಿ
ಕಳೆದ ಬಾರಿ ಕೊರೊನಾ ಮಹಾಮಾರಿಗೆ 18 ಜನ ಶಿಕ್ಷಕರು ಬಲಿಯಾಗಿದ್ದು, ಎರಡನೇ ಅಲೆಯಲ್ಲಿ ಕೇವಲ ಹದಿನೈದು ದಿನಗಳಲ್ಲಿ 22 ಜನ ಶಿಕ್ಷಕರು ಮೃತಪಟ್ಟಿದ್ದಾರೆ.
ಈ ಪೈಕಿ 18 ಜನ ಸರ್ಕಾರಿ ಮತ್ತು ನಾಲ್ವರು ಅನುದಾನಿತ ಶಾಲೆಯ ಶಿಕ್ಷಕರಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಈವರೆಗೆ ಕೊರೊನಾಗೆ ಒಟ್ಟು 40 ಜನ ಶಿಕ್ಷಕರು ಬಲಿಯಾದಂತಾಗಿದೆ.