ಬೆಳಗಾವಿ: ಜಿಲ್ಲೆಯಲ್ಲಿ 22 ಕೊರೊನಾ ಸೋಂಕಿತರು ಗುಣಮುಖರಾಗಿ ಬಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರೆಲ್ಲರೂ ಗುಣಮುಖರಾಗಿ ಮನೆಗೆ ತೆರಳುತ್ತಿರುವುದು ಕುಂದಾನಗರಿಯ ಜನರ ಆತಂಕವನ್ನು ದೂರ ಮಾಡುತ್ತಿದೆ.
ಬೆಳಗಾವಿ: 22 ಕೊರೊನಾ ಸೋಂಕಿತರು ಗುಣಮುಖ, ಸಾರ್ವಜನಿಕರಲ್ಲಿ ತಗ್ಗಿದ ಆತಂಕ - ಬೆಳಗಾವಿ ಸುದ್ದಿ
ಬೆಳಗಾವಿ ಜಿಲ್ಲೆಯಲ್ಲಿ 304 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 246 ಜನ ಗುಣಮುಖರಾಗಿದ್ದಾರೆ. ಇನ್ನುಳಿದಂತೆ 58 ಪ್ರಕರಣಗಳು ಸಕ್ರಿಯವಾಗಿದ್ದು, ಅವರೆಲ್ಲರೂ ಐಸೊಲೇಶನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿಯಲ್ಲಿ 22 ಕೊರೊನಾ ಸೋಂಕಿತರು ಗುಣಮುಖ
ಕೊರೊನಾ ಸೋಂಕಿನಿಂದ ಗುಣಮುಖರಾದವರು
ತಾಲೂಕಿನ ವಿವಿಧ ಗ್ರಾಮಗಳ 13, ಹುಕ್ಕೇರಿ ತಾಲೂಕಿನ 7, ಗೋಕಾಕ್ ತಾಲೂಕಿನ ಇಬ್ಬರು ಸೇರಿದಂತೆ ಒಟ್ಟು 22 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 304 ಸೋಂಕಿತರು ಪತ್ತೆಯಾಗಿದ್ದು, 246 ಜನ ಗುಣಮುಖರಾಗಿದ್ದಾರೆ. ಇನ್ನುಳಿದಂತೆ 58 ಸಕ್ರಿಯ ಪ್ರಕರಣಗಳಿದ್ದು ಐಸೊಲೇಶನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.