ಬೆಳಗಾವಿ:ನಗರದ ಅಂಜುಮನ್ ಖಬರಸ್ತಾನದಲ್ಲಿ 8 ದಿನಗಳ ಅವಧಿಯಲ್ಲಿ 200 ಜನರ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಅಂಜುಮನ್ ಎ ಇಸ್ಲಾಂ ಸಮಿತಿ ಅಧ್ಯಕ್ಷ ರಾಜು ಸೇಠ್ ತಿಳಿಸಿದ್ದಾರೆ.
ಬೆಳಗಾವಿ: ವಾರದ ಅವಧಿಯಲ್ಲಿ 56 ಕೋವಿಡ್ ಕೇಸ್ ಸೇರಿ ಒಟ್ಟು 200 ಮೃತದೇಹಗಳ ಅಂತ್ಯಕ್ರಿಯೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಬರುವ ಮೊದಲು ತಿಂಗಳಿಗೆ ಸುಮಾರು 50 ಜನರ ಅಂತ್ಯಕ್ರಿಯೆ ನಡೆಯುತ್ತಿತ್ತು. ಆದರೀಗ ಬೆಳಗಾವಿಯಲ್ಲಿ ಡೆತ್ ರೇಟ್ ಜಾಸ್ತಿಯಾಗಿದೆ. ವಾರದ ಅವಧಿಯಲ್ಲಿ 56 ಕೋವಿಡ್ ಕೇಸ್ ಸೇರಿ ಒಟ್ಟು 200 ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗಿದೆ ಎಂದರು.
ಇದಲ್ಲದೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು, ಉಸಿರಾಟದ ಸಮಸ್ಯೆ ಎದುರಿಸುತ್ತಿರೋ ರೋಗಿಗಳಿಗೆ ಉಚಿತ ಆಕ್ಸಿಜನ್ ಸಿಲಿಂಡರ್ ನೀಡಲಾಗುತ್ತಿದೆ. ಈಗಾಗಲೇ ಅಂಜುಮನ್ ಎ ಇಸ್ಲಾಂ ಸಮಿತಿಯಿಂದ 120 ಆಕ್ಸಿಜನ್ ಸಿಲಿಂಡರ್ ಖರೀದಿ ಮಾಡುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಲಾಗಿದೆ.
ರೋಗಿಗಳಿಗೆ ಆಕ್ಸಿಜನ್ ಪೂರೈಸಲು ವೈದ್ಯಕೀಯ ತಂಡ ರಚನೆ ಮಾಡಲಾಗಿದೆ. ಈ ತಂಡ ಕೋವಿಡ್ ಪಾಸಿಟಿವ್ ಬಂದು ಮನೆಗಳಲ್ಲಿ ಆರೈಕೆಯಾಗುತ್ತಿರುವವರ ಮನೆಗೆ ಹೋಗಿ ಅಗತ್ಯ ಆಕ್ಸಿಜನ್ ಪೂರೈಸಲು ವ್ಯವಸ್ಥೆ ಮಾಡುತ್ತಿದೆ. ಜನ ಸೇವೆ ಮಾಡುವ ಸಮಯ ಬಂದಿದ್ದು, ಎಲ್ಲರೂ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕಿದೆ ಎಂದರು.