ಕರ್ನಾಟಕ

karnataka

ETV Bharat / state

ಎಸ್​​ಎಸ್​​ಎಲ್​ಸಿ ಪರೀಕ್ಷೆ : ಬೆಳಗಾವಿಯಲ್ಲಿ 1,796 ವಿದ್ಯಾರ್ಥಿಗಳು ತೃತೀಯ ಭಾಷೆಗೆ ಗೈರು ! - chikkodi exam news

ಬೆಳಗಾವಿ ಜಿಲ್ಲೆಯ ಎಂಟು ವಲಯಗಳ ಪೈಕಿ, ಅಥಣಿ - 164, ಕಾಗವಾಡ - 52, ಚಿಕ್ಕೋಡಿ - 373, ನಿಪ್ಪಾಣಿ - 131, ಗೋಕಾಕ - 120, ಮೂಡಲಗಿ - 256, ಹುಕ್ಕೇರಿ - 195, ರಾಯಬಾಗ - 505 ಹೀಗೆ ಒಟ್ಟು 1,796 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಡಿಡಿಪಿಐ ತಿಳಿಸಿದರು.

sslc-hindi-exam
ಎಸ್​​ಎಸ್​​ಎಲ್​ಸಿ ಪರೀಕ್ಷೆ

By

Published : Jul 3, 2020, 6:22 PM IST

ಚಿಕ್ಕೋಡಿ :ಶೈಕ್ಷಣಿಕ‌ ಜಿಲ್ಲೆಯಲ್ಲಿ ಇಂದು‌ ನಡೆದ ತೃತೀಯ ಭಾಷೆ ಪರೀಕ್ಷೆಗೆ 40,439 ವಿದ್ಯಾರ್ಥಿಗಳ ಪೈಕಿ 38,643 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,796 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಈಟಿವಿ ಭಾರತಗೆ ತಿಳಿಸಿದರು.

ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾರ್ಗಸೂಚಿಯನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆದಿದ್ದು, ಯಾವ ವಿದ್ಯಾರ್ಥಿ ಕೂಡಾ ತೃತೀಯ ಭಾಷೆ ವಿಷಯದಲ್ಲಿ ಡಿಬಾರ್​​ ಆಗಿಲ್ಲ.

ಜಿಲ್ಲೆಯ ಎಂಟು ವಲಯಗಳ ಪೈಕಿ, ಅಥಣಿ - 164, ಕಾಗವಾಡ - 52, ಚಿಕ್ಕೋಡಿ - 373, ನಿಪ್ಪಾಣಿ - 131, ಗೋಕಾಕ - 120, ಮೂಡಲಗಿ - 256, ಹುಕ್ಕೇರಿ - 195, ರಾಯಬಾಗ - 505 ಹೀಗೆ ಒಟ್ಟು 1,796 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಂಟೈನ್ಮೆಂಟ್ ಪ್ರದೇಶದಿಂದ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು 22 ಹಾಗೂ ಮಹಾರಾಷ್ಟ್ರದಿಂದ 51 ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದಾರೆ.

ಶೈಕ್ಷಣಿಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ತಮ್ಮ ಮನೆಗಳ ಕಡೆ ಮುಖ ಮಾಡಿದರು.

ABOUT THE AUTHOR

...view details