ಕರ್ನಾಟಕ

karnataka

ETV Bharat / state

ಚಿಕ್ಕೋಡಿ ಶೈಕ್ಷಣಿಕ‌ ಜಿಲ್ಲೆಯಲ್ಲಿಂದು ವಿಜ್ಞಾನ ಪರೀಕ್ಷೆಗೆ 1,793 ವಿದ್ಯಾರ್ಥಿಗಳು ಗೈರು - ಎಸ್​ಎಸ್​ಎಲ್​ಸಿ ಪರೀಕ್ಷೆ

ಚಿಕ್ಕೋಡಿ ಶೈಕ್ಷಣಿಕ‌ ಜಿಲ್ಲೆಯಲ್ಲಿ ಇಂದು‌ ನಡೆದ ಎಸ್​ಎಸ್​ಎಲ್​ಸಿ ವಿಜ್ಞಾನ ಪರೀಕ್ಷೆಗೆ 40,636 ವಿದ್ಯಾರ್ಥಿಗಳ ಪೈಕಿ 38,843 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,793 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

SSLC

By

Published : Jun 29, 2020, 4:59 PM IST

Updated : Jun 29, 2020, 5:47 PM IST

ಚಿಕ್ಕೋಡಿ : ಚಿಕ್ಕೋಡಿ ಶೈಕ್ಷಣಿಕ‌ ಜಿಲ್ಲೆಯಲ್ಲಿ ಇಂದು‌ ನಡೆದ ಎಸ್​ಎಸ್​ಎಲ್​ಸಿ ವಿಜ್ಞಾನ ಪರೀಕ್ಷೆಗೆ 40,636 ವಿದ್ಯಾರ್ಥಿಗಳ ಪೈಕಿ 38,843 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,793 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾರ್ಗಸೂಚಿಯನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುತ್ತಿದ್ದು, ಯಾವ ವಿದ್ಯಾರ್ಥಿಯೂ ಕೂಡ ವಿಜ್ಞಾನ ಪರೀಕ್ಷೆಯಲ್ಲಿ ಡಿಬಾರ್ ಆಗಿಲ್ಲ ಎಂದರು.

ಇನ್ನು ಜಿಲ್ಲೆಯಲ್ಲಿ ಎಂಟು ವಲಯಗಳಿದ್ದು ಅಥಣಿ - 162, ಕಾಗವಾಡ - 49, ಚಿಕ್ಕೋಡಿ - 392, ನಿಪ್ಪಾಣಿ - 129, ಗೋಕಾಕ್ - 119, ಮೂಡಲಗಿ - 253, ಹುಕ್ಕೇರಿ - 192, ರಾಯಬಾಗ - 497 ಹೀಗೆ ಒಟ್ಟು 1,793 ವಿದ್ಯಾರ್ಥಿಗಳು ಇಂದು ನಡೆದ ಪರೀಕ್ಷೆಗೆ ಗೈರಾಗಿದ್ದಾರೆ. ಕಂಟೈನ್ ಮೆಂಟ್ ಪ್ರದೇಶಗಳಿಂದ 22 ವಿದ್ಯಾರ್ಥಿಗಳು ಹಾಗೂ ಮಹಾರಾಷ್ಟ್ರದಿಂದ 51 ವಿದ್ಯಾರ್ಥಿಗಳು ಬಂದು ಎಸ್ಎಸ್ಎಲ್‌ಸಿ ಪರೀಕ್ಷೆಗೆ ಬರೆದಿದ್ದಾರೆ ಎಂದರು.

Last Updated : Jun 29, 2020, 5:47 PM IST

ABOUT THE AUTHOR

...view details