ಕರ್ನಾಟಕ

karnataka

ETV Bharat / state

ಗೋವಾದಿಂದ ಅಕ್ರಮವಾಗಿ ರಾಜ್ಯಕ್ಕೆ ಸಾಗಿಸುತ್ತಿದ್ದ 173 ಬಾಕ್ಸ್ ಮದ್ಯ ವಶ! - Belgaum-Goa border

ಗೋವಾದಿಂದ ಅಕ್ರಮವಾಗಿ ಕರ್ನಾಟಕದೊಳಗೆ ಸಾಗಿಸುತ್ತಿದ್ದ 6 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

173 box of liquor seized In Belagavi carrying from Goa
ಗೋವಾದಿಂದ ಅಕ್ರಮವಾಗಿ ರಾಜ್ಯಕ್ಕೆ ತರುತ್ತಿದ್ದ 173 ಬಾಕ್ಸ್ ಮದ್ಯ ವಶ

By

Published : Jul 11, 2020, 11:26 PM IST

ಚಿಕ್ಕೋಡಿ (ಬೆಳಗಾವಿ): ಗೋವಾದಿಂದ ಅಕ್ರಮವಾಗಿ ಸುಮಾರು 6,22,300 ರೂಪಾಯಿ ಬೆಲೆ ಬಾಳುವ ಮದ್ಯ ಸಾಗಿಸುವ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋವಾದಿಂದ ನಿಪ್ಪಾಣಿ ಕಡೆಗೆ ಲಾರಿಯಲ್ಲಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಜಿಲ್ಲಾ ಸಿಇಎನ್​​ ಕ್ರೈಂ ಪೊಲೀಸರು ಯಮಕನಮರಡಿ ಪೊಲೀಸ್ ಸರಹದ್ದಿನಲ್ಲಿ ವಶಕ್ಕೆ ಪಡೆದಿದ್ದಾರೆ. ಹುಕ್ಕೇರಿ ತಾಲೂಕಿನ ಎನ್‌ಎಚ್-4 ರಸ್ತೆ ಮೆಣಗತ್ತಿ ಕ್ರಾಸ್ ಬಳಿ ಒಟ್ಟು 6,22,300 ಬೆಲೆ ಬಾಳುವ 173 ಬಾಕ್ಸ್​ನಲ್ಲಿ ತುಂಬಿದ್ದ ಮದ್ಯ ವಶಕ್ಕೆ ಪಡೆಯಲಾಗಿದೆ.

ಘಟನೆ ಸಂಬಧ ಓರ್ವನನ್ನು ಬಂಧಿಸಲಾಗಿದ್ದು, ಆತನನ್ನು ಬೆಳಗಾವಿ ಜಿಲ್ಲೆಯ ಹೊನಗಾ ಗ್ರಾಮದ ಜನತಾ ಪ್ಲಾಟ್​​ನ ನಿವಾಸಿ ಶಕೀಲ ಕಾಸೀಮಸಾಬ ಶೇಖ (34) ಎಂದು ಗುರುತಿಸಲಾಗಿದೆ. ಈ ಕುರಿತು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details