ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಬೆಳಗಾವಿ ಅಜಂ ನಗರದ ವಾರ್ಡ್ ನಂ 25ರಲ್ಲಿ 1,500ಕ್ಕೂ ಹೆಚ್ಚು ಮತದಾರರ ಹೆಸರುಗಳು ಮಾಯವಾಗಿದ್ದು, ಮತದಾರರು ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಒಂದೇ ವಾರ್ಡ್ನ 1,500 ಮತದಾರರ ಹೆಸರು ನಾಪತ್ತೆ.. ಚುನಾವಣೆ ನಿಲ್ಲಿಸುವ ಎಚ್ಚರಿಕೆ - ಮತದಾರರ ಹೆಸರು ನಾಪತ್ತೆ
ಬೆಳಗಾವಿಯ ಒಂದೇ ವಾರ್ಡ್ನ 1,500ಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದ್ದು, ಮತದಾರರು ಆಕ್ರೋಶ ಹೊರಹಾಕಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ನಿಲ್ಲಿಸುತ್ತೇವೆ ಎಂದು ಇವರೆಲ್ಲ ಎಚ್ಚರಿಕೆ ಕೊಟ್ಟಿದ್ದಾರೆ.
ಒಂದೇ ವಾರ್ಡ್ನ 1,500 ಮತದಾರರ ಹೆಸರು ನಾಪತ್ತೆ
ಜೊತೆಗೆ 3 ಗಂಟೆಯೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಪ್ರಕ್ರಿಯೇ ನಿಲ್ಲಿಸುತ್ತೇವೆ ಎಂದು ಪಾಲಿಕೆ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯ ಅಜಂ ನಗರದ ಉರ್ದು ಶಾಲೆಯಲ್ಲಿ ತೆರೆಯಲಾದ ವಾರ್ಡ್ ನಂಬರ್ 25ರ ಮತಕೇಂದ್ರಕ್ಕೆ ಮತದಾನ ಮಾಡಲು ಆಗಮಿಸಿದ ಜನರ ಹೆಸರುಗಳೇ ವೋಟಿಂಗ್ ಲಿಸ್ಟ್ನಲ್ಲಿ ಮಾಯವಾಗಿತ್ತು. ಹೀಗಾಗಿ ಪಾಲಿಕೆ ಅಧಿಕಾರಿಗಳ ವಿರುದ್ಧ ಜನರು ಗರಂ ಆಗಿದ್ದು, ಸಮಸ್ಯೆ ತಕ್ಷಣ ಬಗೆಹರಿಸುವಂತೆ ಎಚ್ಚರಿಸಿದ್ದಾರೆ.