ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಇಂದು ಮತ್ತೆ 15 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ರಾಯಬಾಗ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳು ಮುಂಬೈ, ಬೆಂಗಳೂರು ಮತ್ತು ನೆರೆ ತಾಲೂಕಿನ ನಂಟಿನಿಂದಾಗಿ ಕೋವಿಡ್-19 ಹಾಟ್‍ಸ್ಪಾಟ್ ಆಗುತ್ತಿರುವುದು ತಾಲೂಕಿನ ಜನರಲ್ಲಿ ಭಯ ಮತ್ತು ಆತಂಕ ಮೂಡಿಸುತ್ತಿದೆ.
ರಾಯಬಾಗ ತಾಲೂಕಿನಲ್ಲಿ ಇಂದು 15 ಕೊರೊನಾ ಪಾಸಿಟಿವ್ ಕೇಸ್ ಪತ್ತೆ... - ಚಿಕ್ಕೋಡಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಇಂದು ಮತ್ತೆ 15 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ತಾಲೂಕಿನ ಕುಡಚಿ ಪಟ್ಟಣ ಹೊರತುಪಡಿಸಿ ಇಡೀ ತಾಲೂಕು ಕೊರೊನಾ ಮುಕ್ತವಾಗಿತ್ತು. ರಾಯಬಾಗ ಸುತ್ತಮುತ್ತಲಿನ ತಾಲೂಕುಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದರೂ, ತಾಲೂಕಿನಲ್ಲಿ ಮಾತ್ರ ಯಾವುದೇ ಪ್ರಕರಣಗಳು ಕಂಡು ಬರದೇ ಇರುವುದರಿಂದ ತಾಲೂಕಿನ ಜನರು ನೆಮ್ಮದಿಯಿಂದ ತಮ್ಮ ವ್ಯಾಪಾರ-ವಹಿವಾಟಿನೊಂದಿಗೆ ಓಡಾಡಿಕೊಂಡಿದ್ದರು. ಆದರೆ, ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರಲ್ಲಿ ಆತಂಕ ಶುರುವಾಗಿದೆ.
ಇಂದು ರಾಯಬಾಗ ತಾಲೂಕಿನಲ್ಲಿ ಮತ್ತೆ 15 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ರಾಯಬಾಗ ಪಟ್ಟಣ-1, ರಾಯಬಾಗ ಗ್ರಾಮೀಣ-1, ಕುಡಚಿ-3, ನಂದಿಕುರಳಿ-2, ಹಂದಿಗುಂದ-2, ಸಿದ್ದಾಪೂರ-1, ಮೇಖಳಿ-1, ಚಿಂಚಲಿ ಪಟ್ಟಣ-1, ಅಳಗವಾಡಿ-1, ಯಲ್ಪಾರಟ್ಟಿ-1 ಸೇರಿದಂತೆ ಒಟ್ಟು 15 ಕೋವಿಡ್-19 ಪ್ರಕರಣಗಳು ಕಂಡು ಬಂದಿದ್ದು, ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಸಿದ್ದಾಪುರದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ ರಾಯಬಾಗ ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್. ಬಾನೆ ತಿಳಿಸಿದ್ದಾರೆ.