ಕರ್ನಾಟಕ

karnataka

ETV Bharat / state

ಬೆಳಗಾವಿಯನ್ನು ಕಾಡ್ತಿದೆ 'ಮಹಾ' ನಂಜು... ಇಂದು‌ 13 ಜನರಿಗೆ ಕೊರೊನಾ ಸೋಂಕು ದೃಢ - Coronal infection in Maharashtra

ಮಹಾರಾಷ್ಟ್ರ ನಂಜು ಬೆಳಗಾವಿಯನ್ನು ಬಿಟ್ಟು ಬಿಡದೇ ಕಾಡುತ್ತಿದ್ದು,‌ ಇಂದು ಒಂದೇ ದಿನ 13 ಜನರಿಗೆ ಕೊರೊನಾ‌ ಸೋಂಕು ತಗುಲಿದೆ.

13 new corona positive cases confirm in Belagavi
ಬೆಳಗಾವಿಯ‌ 13 ಜನರಿಗೆ ಕೊರೊನಾ ಸೋಂಕು ದೃಢ; 160ಕ್ಕೇರಿದ ಪೀಡಿತರ ‌ಸಂಖ್ಯೆ

By

Published : May 31, 2020, 8:01 PM IST

ಬೆಳಗಾವಿ:ನೆರೆಯ ಮಹಾರಾಷ್ಟ್ರದಿಂದ ಮರಳಿದ್ದ ಒಂದು ವರ್ಷದ ಮಗು ಸೇರಿ‌ ಜಿಲ್ಲೆಯ 13 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಮಹಾರಾಷ್ಟ್ರ ನಂಜು ಬೆಳಗಾವಿಯನ್ನು ಬಿಟ್ಟು ಬಿಡದೇ ಕಾಡುತ್ತಿದ್ದು,‌ ಇಂದು ಒಂದೇ ದಿನ 13 ಜನರಿಗೆ ಕೊರೊನಾ‌ ಸೋಂಕು ತಗುಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. 13 ಸೋಂಕಿತರ ಪೈಕಿ 11 ಜನ ಮಹಾರಾಷ್ಟ್ರದಿಂದ ಮರಳಿದ್ದವರು, ಇಬ್ಬರು ದೆಹಲಿಯಿಂದ ಮರಳಿದವರಾಗಿದ್ದಾರೆ.

ಬೆಳಗಾವಿ ತಾಲೂಕಿನ ಐವರು, ಚಿಕ್ಕೋಡಿಯ ‌ಐವರು ಹಾಗೂ ಹುಕ್ಕೇರಿ ಪಟ್ಟಣದ ‌ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಖಚಿತಪಡಿಸಿದೆ.

ABOUT THE AUTHOR

...view details