ಚಿಕ್ಕೋಡಿ: ಮಳೆ ನೀರು ಹರಿದು ನದಿ ಸೇರುವ ಬದಲು ಹರಿಯುವ ನೀರನ್ನು ತಡೆಯಲು ಖಾನಾಪೂರ ಹಾಗೂ ಚಿಕ್ಕೋಡಿ ತಾಲೂಕಿನ ವಿವಿಧೆಡೆ ಸಣ್ಣ ಹಾಗೂ ಬೃಹತ್ ನೀರಾವರಿ ಇಲಾಖೆ ಮೂಲಕ 10 ಕೋಟಿ ರೂ. ವೆಚ್ಚದಲ್ಲಿ 13 ಬ್ಯಾರೇಜ್ ಕಂ ಬಾಂದಾರ ನಿರ್ಮಿಸಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದರು.
ತಾಲೂಕಿನ ನವಲಿಹಾಳ ಗ್ರಾಮದಲ್ಲಿ ನಿರ್ಮಿಸಿರುವ ಬ್ಯಾರೇಜ್ ಕಂ ಬಾಂದಾರ ಭರ್ತಿಯಾಗಿರುವ ಹಿನ್ನೆಲ್ಲೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ಈಗಾಗಲೇ 13 ಬ್ಯಾರೇಜ್ ಕಂ ಬಾಂದಾರ ನಿರ್ಮಿಸಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ 100 ಬ್ಯಾರೇಜ್ ಕಂ ಬಾಂದಾರ ನಿರ್ಮಿಸುವ ಗುರಿ ಇದೆ.