ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್​​ಗೆ 12 ಟ್ರ್ಯಾಲಿ ಜೋಡಿಸಿ ಕಬ್ಬು ತುಂಬಿಸಿ ಚಾಲನೆ: ಮುಂದಾಗಿದ್ದೇನು ನೀವೇ ನೋಡಿ!

ರಾಜು ಬಿಸ್ಟಾನಿ ಎಂಬುವವರಿಗೆ ಸೇರಿದ ಕಬ್ಬನ್ನು ಕಟಾವು ಮಾಡಿ ಒಂದೇ ಟ್ರ್ಯಾಕ್ಟರ್​​ಗೆ 12ಟ್ರ್ಯಾಲಿ ಜೋಡಿಸಿ 120 ಟನ್ ಕಬ್ಬು ಸಾಗಾಟ ಮಾಡುವ ಮೂಲಕ ಇಲ್ಲೊಬ್ಬ ಚಾಲಕ ಸಾಹಸ ಮಾಡಲು ಹೋಗಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

12 trailer to the tractor and filling the cane
ಟ್ರ್ಯಾಕ್ಟರ್​​ಗೆ 12 ಟ್ರೇಲರ್ ಜೋಡಿಸಿ ಕಬ್ಬು ತುಂಬಿಕೊಂಡು ಚಾಲನೆ

By

Published : Jan 27, 2021, 7:40 AM IST

ಅಥಣಿ:ಸಾಮಾನ್ಯವಾಗಿ ಕಬ್ಬು ಸರಬರಾಜು ಮಾಡಲು ರೈತರು ಎರಡು ಟ್ರೇಲರ್​ಗಳಿರುವ ಟ್ರ್ಯಾಕ್ಟರ್​ನಿಂದ ಕಾರ್ಖಾನೆಗಳಿಗೆ ಸಾಗಣೆ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ಚಾಲಕ ಒಂದೇ ಟ್ರ್ಯಾಕ್ಟರ್​​ಗೆ 12 ಟ್ರ್ಯಾಲಿ ಜೋಡಿಸಿ 120 ಟನ್ ಕಬ್ಬು ಸಾಗಾಟ ಮಾಡುವ ಮೂಲಕ ಸಾಹಸ ಮಾಡಿದ್ದಾನೆ.

ಟ್ರ್ಯಾಕ್ಟರ್​​ಗೆ 12ಟ್ರ್ಯಾಲಿಜೋಡಿಸಿ ಕಬ್ಬು ತುಂಬಿಕೊಂಡು ಚಾಲನೆ

ಹಿಂದುಸ್ತಾನ್ ಟ್ರ್ಯಾಕ್ಟರ್ ಮುಖಾಂತರ 12 ಟ್ರ್ಯಾಲಿ​​ಗಳಲ್ಲಿ ಕಬ್ಬನ್ನು ಸಾಗಾಟ ಮಾಡುವುದೂ ಸಾಮಾನ್ಯವಾದ ಸಂಗತಿಯಲ್ಲ. ರಾಜು ಬಿಸ್ಟಾನಿ ಎಂಬುವವರಿಗೆ ಸೇರಿದ ಕಬ್ಬನ್ನು ರಾಯಭಾಗ ತಾಲೂಕಿನ ಕಂಕನಾಡಿ ಗ್ರಾಮದಿಂದ ಕಟಾವೂ ಮಾಡಿಕೊಂಡು ಟ್ರ್ಯಾಕ್ಟರ್​ನಲ್ಲಿ ಕಾಗವಾಡ ತಾಲೂಕಿನ ಕೇಂಪವಾಡ್ ಸಕ್ಕರೆ ಕಾರ್ಖಾನೆಗೆ ಅಥಣಿ ಮಾರ್ಗವಾಗಿ ತರುತ್ತಿದ್ದರು.

ದೂರಿನ ಪ್ರತಿ

ಆರು ಗಂಟೆಯಲ್ಲಿ 12 ಟ್ರೇಲರ್ ಕಬ್ಬು ಕಟಾವು ಮಾಡಲಾಗಿದೆ. ಚಾಲಕ್ ಹನುಮಂತ ಹುಕ್ಕೇರಿ ಕೂಡ ಟ್ರ್ಯಾಕ್ಟರ್​​ ಚಾಲನೆ ಮಾಡಿ ಸಾಹಸ ಮಾಡಿದ್ದಾರೆ.

ಓದಿ:ನಾವು ಅನ್ನ ಕೊಟ್ಟವರು, ಪ್ರಧಾನಿ ಮೋದಿ ಮೇಲೆ ನಮ್ಗೆ ವಿಶ್ವಾಸವಿಲ್ಲ: ಬಾಬಾಗೌಡ ಪಾಟೀಲ್​

ಹುಚ್ಚು ಸಾಹಸಕ್ಕೆ ಅಥಣಿ ಪೊಲೀಸರ ತಡೆ: ರಾಯಬಾಗ ತಾಲೂಕಿನಿಂದ ದರೂರ-ಅಥಣಿ ಮಾರ್ಗವಾಗಿ ಟ್ರ್ಯಾಕ್ಟರ್ ಬರುತ್ತಿರುವುದನ್ನು ಗಮನಿಸಿದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಟ್ರ್ಯಾಕ್ಟರ್ ಹಾಗೂ ಚಾಲಕ ಸೇರಿದಂತೆ ಒಟ್ಟು 17 ವಾಹನಗಳು 5 ಜನರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರಿಗೆ ತೊಂದರೆ, ಅತಿ ಭಾರ ಸಾಗಾಟ ಪ್ರಕರಣ ದಾಖಲಿಸಿಕೊಂಡು, ಅಥಣಿ ಸಿಪಿಐ ಶಂಕರಗೌಡ ಬಸವನಗೌಡರ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ.

ದೂರು ಪ್ರತಿ

ಅಥಣಿ ಆರ್​​ಟಿಓ ಅಧಿಕಾರಿಗಳ ಕುರುಡು ವರ್ತನೆ:

ಒಂದೆ ಟ್ರ್ಯಾಕ್ಟರ್​ಗೆ 12 ಟ್ರೇಲರ್ ಜೋಡಿಸಿಕೊಂಡು ಅಂದಾಜು 120 ಟನ್ ಭಾರವಾದ ಕಬ್ಬನ್ನು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಆರ್​ಟಿಓ ಕಚೇರಿ ಮುಂಭಾಗದಲ್ಲಿ ಸಂಚಾರ ಮಾಡಿದೆ. ಆದ್ರೂ ಅಧಿಕಾರಿಗಳು, ಸಿಬ್ಬಂದಿ ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಥಣಿ ಪಟ್ಟಣದಲ್ಲಿ ಜನಸಾಮಾನ್ಯರಿಗೆ ತೊಂದರೆ ಹಾಗೂ ವಾಹನಗಳ ದಟ್ಟನೆ ಮನಗಂಡ ಅಥಣಿ ಪೊಲೀಸರು ಕೊನೆಗೂ ರೈಲು ಟ್ರ್ಯಾಕ್ಟರ್ ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details