ಬೆಳಗಾವಿ: ಜಿಲ್ಲೆಯಲ್ಲಿ 12 ಜನ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆ ಬಿಮ್ಸ್ನಿಂದ ಬಿಡುಗಡೆಗೊಳಿಸಲಾಗಿದೆ.
ಬೆಳಗಾವಿಯಲ್ಲಿ 12 ಜನ ಕೊರೊನಾದಿಂದ ಗುಣಮುಖ: ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ - Corona infected people cured
ಬೆಳಗಾವಿ ಜಿಲ್ಲೆಯಲ್ಲಿ 12 ಜನ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಕೋವಿಡ್ ಆಸ್ಪತ್ರೆ ಬಿಮ್ಸ್ನಿಂದ ಬಿಡುಗಡೆ ಮಾಡಲಾಗಿದೆ.

ಕೊರೊನಾ ಸೋಂಕಿತರು ಗುಣಮುಖ
ಗುಣಮುಖರಾದ 12 ಜನ ಕೊರೊನಾ ಸೋಂಕಿತರು ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ
ಜಿಲ್ಲೆಯಲ್ಲಿ ಈವರೆಗೆ 165 ಸೋಂಕಿತರು ಗುಣಮುಖರಾಗಿದ್ದು, 135 ಸೋಂಕಿತರು ಕೋವಿಡ್-19 ಐಸೋಲೇಶನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಹುಕ್ಕೇರಿ ತಾಲೂಕಿನ 6 ಜನರು, ಅಥಣಿಯ ಇಬ್ಬರು, ರಾಯಭಾಗದ ಓರ್ವ ಹಾಗೂ ಬೆಳಗಾವಿಯ ಬೆಂಡಿಗೇರಿ, ಮಾರ್ಕಂಡೇಯ ನಗರ ಹಾಗೂ ನೆಹರೂ ನಗರಗಳ ನಿವಾಸಿಗಳು ಸೇರಿದಂತೆ ಒಟ್ಟು 12 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಸಾರಿಗೆ ಬಸ್ ಮೂಲಕ ಮನೆಗೆ ತೆರಳಿದ್ದಾರೆ.
ಸೋಂಕು ಪತ್ತೆಯಾಗಿದ್ದವರೆಲ್ಲರೂ ಹೊರ ರಾಜ್ಯಗಳಿಂದ ಬಂದವರಾಗಿದ್ದು, ಇವರನ್ನು ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಬೀಳ್ಕೊಟ್ಟಿದ್ದಾರೆ.