ಬೆಳಗಾವಿ:ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಸಮಯದಲ್ಲಿ ಆರೋಗ್ಯ ಸೇವೆಯ ನೆನಪಿಗಾಗಿ ಸರ್ಕಾರಿ ಶಾಲೆಯೊಂದರ ಗೋಡೆಯ ಮೇಲೆ 'ಆರೋಗ್ಯ ಕವಚ 108' ವಾಹನದ ಚಿತ್ರ ಬಿಡಿಸಿ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ.
ಸರ್ಕಾರಿ ಶಾಲೆಯೊಳಗೊಂದು ಆರೋಗ್ಯ ಕವಚ ವಾಹನ... ಹೇಗಿದೆ ಗೊತ್ತೆ..? - 108 Vehicle image of health cover on government school wall!
ಪ್ರವಾಹದಿಂದ ಬೆಂದು ಹೋಗಿದ್ದ ಬೆಳಗಾವಿ ಜಿಲ್ಲೆಯ ಜನ ಈಗ ಕೊಂಚ ಸುಧಾರಿಸಿಕೊಳ್ಳುತ್ತಿದ್ದಾರೆ. ಈಗ ಶಾಲೆಗೆ ಮಕ್ಕಳನ್ನು ಸೆಳೆಯಲು ವಿಭಿನ್ನ ಪ್ರಯತ್ನ ಮಾಡಲಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
![ಸರ್ಕಾರಿ ಶಾಲೆಯೊಳಗೊಂದು ಆರೋಗ್ಯ ಕವಚ ವಾಹನ... ಹೇಗಿದೆ ಗೊತ್ತೆ..?](https://etvbharatimages.akamaized.net/etvbharat/prod-images/768-512-4774000-thumbnail-3x2-vis.jpg)
ಸರ್ಕಾರಿ ಶಾಲೆಯ ಗೋಡೆ ಮೇಲೆ ಆರೋಗ್ಯ ಕವಚ 108 ವಾಹನ ಚಿತ್ರ!
ಸರ್ಕಾರಿ ಶಾಲೆಯ ಗೋಡೆ ಮೇಲೆ ಆರೋಗ್ಯ ಕವಚ 108 ವಾಹನ ಚಿತ್ರ!
ಪ್ರವಾಹ ಇಳಿದ ನಂತರ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ಸಹಾಯದಿಂದ ಶಾಲೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಶಾಲೆಗೆ ಮರು ಜೀವ ನೀಡಿ ವಿದ್ಯಾರ್ಥಿಗಳನ್ನು ಸೆಳೆಯುವಂತೆ ಮಾಡಿದ್ದಾರೆ. ಶಾಲೆಯ ಶಿಕ್ಷಕರ ಈ ಕಾರ್ಯಕ್ಕೆ ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.