ಚಿಕ್ಕೋಡಿ (ಬೆಳಗಾವಿ): ಆರೋಗ್ಯ ಸಮಸ್ಯೆಯಿಂದ ಜು.13 ರಂದು ಬೆಳಗಾವಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ 27 ವರ್ಷದ ಯುವಕ ಇಂದು ಕೊರೊನಾದಿಂದ ಸಾವನ್ನಪ್ಪಿದ್ದಾನೆ.
ಚಿಕ್ಕೋಡಿ: ಕೊರೊನಾ ಸೋಂಕಿಗೆ ಓರ್ವ ಯುವಕ ಬಲಿ - Corona Latest News
ಚಿಕ್ಕೋಡಿಯಲ್ಲಿ ಕೊರೊನಾ ವೈರಸ್ಗೆ ಇಂದು 27 ವರ್ಷದ ಯುವಕ ಬಲಿಯಾಗಿದ್ದಾನೆ. ಈತ ವಾಸವಿದ್ದ ಗ್ರಾಮವನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.
ಚಿಕ್ಕೋಡಿ: ಕೊರೊನಾ ಮಹಾಮಾರಿಗೆ ಓರ್ವ ಯುವಕ ಬಲಿ
ಮೃತ ಯುವಕ ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದಾಗಿ ಕಳೆದ ಜು.13 ರಂದು ಬೆಳಗಾವಿಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದನು. ಈತನಿಗೆ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಚಿಂಚಲಿ ಪ.ಪಂ ಮುಖ್ಯಾಧಿಕಾರಿ ಎಸ್.ಜಿ. ಪೂಜಾರಿ ಮಾಹಿತಿ ನೀಡಿದ್ದಾರೆ.
ಇದಲ್ಲದೆ ಪಟ್ಟಣ ಪಂಚಾಯಿತಿ ಚಿಂಚಲಿ ಪಟ್ಟಣವನ್ನು ಒಂದು ವಾರಗಳ ಕಾಲ ಲಾಕ್‌ಡೌನ್ ಮಾಡಿದೆ. ಚಿಂಚಲಿ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಕೊರೊನಾ ಆತಂಕ ಎದುರಾಗಿದೆ.