ಕರ್ನಾಟಕ

karnataka

ETV Bharat / state

ಆರ್ಡರ್​ ಲೇಟಾಯ್ತಂತ ಕಿಚನ್​ ಒಳಗೆ ನುಗ್ಗಿ ಹೊಡೆದ ಜೊಮೆಟೋ ಬಾಯ್ಸ್​​... ವಿಡಿಯೋ ವೈರಲ್​ - ಜೊಮೆಟೋ ಯುವಕರು ಹಲ್ಲೆ

ಆರ್ಡರ್ ಲೇಟಾಯಿತೆಂದು ಹೋಟೆಲ್ ಸಿಬ್ಬಂದಿ ಮೇಲೆ ಜೊಮೆಟೋ ಹುಡುಗರು ಹಲ್ಲೆ ಮಾಡಿದ್ದು, ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಜೊಮೆಟೋ ಬಾಯ್ಸ್

By

Published : Nov 7, 2019, 12:28 PM IST

ಬೆಂಗಳೂರು:ಕೊಟ್ಟ ಆರ್ಡರ್ ಲೇಟಾಯ್ತೆಂದು ಹೋಟೆಲ್ ಸಿಬ್ಬಂದಿ ಮೇಲೆ ಜೊಮೆಟೋ ಯುವಕರು ಹಲ್ಲೆ ಮಾಡಿರುವ ಘಟನೆ, ಹೆಬ್ಬಾಳ ಬಳಿಯ ತ್ರೀಪ್ಸಿ ರೆಸ್ಟೋರೆಂಟ್ನಲ್ಲಿ ನಡೆದಿದೆ.

ಜೊಮೆಟೋ ಬಾಯ್‌ ತ್ರೀಪ್ಸಿ ರೆಸ್ಟೋರೆಂಟ್​ನಲ್ಲಿ ಊಟ ಅರ್ಡರ್ ಮಾಡಿದ್ದ. ಅರ್ಧ ಗಂಟೆಯಾದರೂ, ಊಟ ಕೊಟ್ಟಿಲ್ಲವೆಂದು ಕಿಚನ್ ಒಳಗೆ ಹೋಗಿ ಜೊಮೆಟೋ ಬಾಯ್ ಗಲಾಟೆ ಮಾಡಿದ್ದಾನೆ. ಈ ವೇಳೆ ಒಳಗೆ ಪ್ರವೇಶವಿಲ್ಲ ಎಂದು ಹೊಟೇಲ್ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಜೊಮೆಟೋ ಬಾಯ್ 20 ಕ್ಕೂ ಹೆಚ್ಚು ಜನರನ್ನು ಕರೆತಂದು ಹೋಟೆಲ್​​ ಸಿಬ್ಬಂದಿಯ ಮೇಲೆ ಹಲ್ಲೆ‌ಮಾಡಿಸಿದ್ದಾನೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್​ ಆಗುತ್ತಿದೆ.

ಜೊಮೆಟೋ ಬಾಯ್ಸ್​ನ ರೌಡಿಸಂ

ಹೋಟೆಲ್​ ಹಾಗೂ ಜೊಮೆಟೋ ಎರಡೂ ಕಡೆಯವರಿಂದ ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದ್ದು ತನಿಖೆ‌ ಮುಂದುವರೆದಿದೆ.

ABOUT THE AUTHOR

...view details