ಬೆಂಗಳೂರು:ಜೊಮ್ಯಾಟೊ ಕಂಪನಿಯ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದ ಮಹಿಳೆ ವಿರುದ್ಧವೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲಾಗಿದೆ.
ಡೆಲಿವರಿ ಬಾಯ್ ಕಾಮರಾಜ್ ನೀಡಿದ ದೂರಿನ ಮೇರೆಗೆ ಹಿತೇಶ್ ಚಂದ್ರಾಣಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾ.9 ರಂದು ಹಿತೇಶ್ ಚಂದ್ರಾಣಿ ಜೊಮ್ಯಾಟೊ ಪುಡ್ ಆರ್ಡರ್ ಮಾಡಿದ್ದರು. ಆರ್ಡರ್ ತಡವಾಗಿದ್ದಕ್ಕೆ ಡೆಲಿವರಿ ಬಾಯ್ ಜೊತೆ ಜಗಳವಾಗಿತ್ತು. ಈ ವೇಳೆ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟು ನೋವು ತೋಡಿಕೊಂಡಿದ್ದರು.