ಕರ್ನಾಟಕ

karnataka

ETV Bharat / state

Zero shadow day: ಆ.18ರಂದು ಬೆಂಗಳೂರಿನಲ್ಲಿ 'ಶೂನ್ಯ ನೆರಳು' ಗೋಚರ - ಬೆಂಗಳೂರು ನ್ಯೂಸ್​

ಆಗಸ್ಟ್ 18 ರಂದು ಬೆಂಗಳೂರು ಮತ್ತೊಮ್ಮೆ "ಶೂನ್ಯ ನೆರಳಿನ ದಿನ"ಕ್ಕೆ ಸಾಕ್ಷಿಯಾಗಲಿದೆ. ಈ ವಿದ್ಯಮಾನಕ್ಕೆ ಕಾರಣ ಮತ್ತು ಇತರ ಪ್ರಮುಖ ವಿವರ ಹೀಗಿದೆ..

Representative image
ಪ್ರಾತಿನಿಧಿಕ ಚಿತ್ರ

By

Published : Aug 16, 2023, 6:50 AM IST

ಬೆಂಗಳೂರು: ನಗರದಲ್ಲಿ ನೆಲೆಸಿರುವ ಜನರು ಆಗಸ್ಟ್ 18ರಂದು ಮತ್ತೊಮ್ಮೆ ಶೂನ್ಯ ನೆರಳು ದಿನ ಕಣ್ತುಂಬಿಕೊಳ್ಳಲಿದ್ದಾರೆ. ಅಪರೂಪದ ಶೂನ್ಯ ನೆರಳು ದಿನಕ್ಕೆ ಬೆಂಗಳೂರಿಗರು ಈ ವರ್ಷ ಸಾಕ್ಷಿಯಾಗಿದ್ದರು. ಏಪ್ರಿಲ್ 25ರಂದು ಮಧ್ಯಾಹ್ನ 12.17ಕ್ಕೆ ಶೂನ್ಯ ನೆರಳಿನ ದಿನ ಗೋಚರವಾಗಿತ್ತು.

ಪ್ರಾತಿನಿಧಿಕ ಚಿತ್ರ

ಆ ದಿನದಂದು ಎರಡು ನಿಮಿಷಗಳ ಕಾಲ ಯಾವುದೇ ನೆರಳು ಕಂಡು ಬಂದಿರಲಿಲ್ಲ. ಸೂರ್ಯ ಸರಿಯಾಗಿ ಮನುಷ್ಯನ ನೆತ್ತಿಯ ಮೇಲೆ ಅಥವಾ ಕಿರಣಗಳು ಯಾವುದೇ ವಸ್ತುವಿನ ಮೇಲೆ ಲಂಬವಾಗಿ ಬಿದ್ದಾಗ ಅದು ಶೂನ್ಯ ನೆರಳಿನ ನಿಮಿಷವಾಗುತ್ತದೆ.

ಈ ಕುರಿತು ಮಾಹಿತಿ ನೀಡಿರುವ ಜವಾಹರ್ ಲಾಲ್ ನೆಹರು ತಾರಾಲಯ ಯಾವುದೇ ವಸ್ತುಗಳನ್ನು 90 ಡಿಗ್ರಿಯಲ್ಲಿಟ್ಟಾಗ ಅದರ ನೆರಳು ಎರಡು ನಿಮಿಷದವರೆಗೆ ಕಾಣುವುದಿಲ್ಲ ಎಂದು ತಿಳಿಸಿದೆ. ಪ್ರತಿ ದಿನ ಸೂರ್ಯ ಮಧ್ಯಾಹ್ನ ನೆತ್ತಿ ಮೇಲೆ ಬರುತ್ತಾನೆ. ಆದರೆ Zero shadow day ದಿನದಂದು ಯಾವುದೇ ಲಂಬ ರೀತಿಯ ವಸ್ತು/ ವ್ಯಕ್ತಿಗಳ ನೆರಳು ಗೋಚರವಾಗದು. ಭೂಮಿ ಗೋಳಾಕಾರದಲ್ಲಿದ್ದು, ಸೂರ್ಯನ ಕಿರಣಗಳು ಮಧ್ಯಾಹ್ನ ಸಮಭಾಜಕದಲ್ಲಿ ಮಾತ್ರ ಬೀಳುತ್ತವೆ. ಈ ನೆರಳು ಉತ್ತರ/ದಕ್ಷಿಣ ದಿಕ್ಕಿಗೆ ಬೀಳುವುದಿಲ್ಲ. ಸೂರ್ಯನ ಪಥವು ಉತ್ತರದ ಚಲನೆಯಲ್ಲಿ 6 ತಿಂಗಳು ಉತ್ತರಾಭಿಮುಖವಾಗಿರುತ್ತದೆ. ದಕ್ಷಿಣದ ಚಲನೆಯಲ್ಲಿ 6 ತಿಂಗಳುಗಳು ದಕ್ಷಿಣಾಭಿಮುಖವಾಗಿರುತ್ತದೆ ಎಂದು ತಾರಾಲಯದ ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಇದನ್ನೂ ಓದಿ:ಶೂನ್ಯ ನೆರಳು ದಿನ: ಖಗೋಳ ಕೌತುಕಕ್ಕೆ ಸಾಕ್ಷಿಯಾದ ಉದ್ಯಾನ ನಗರಿ..

ಈ ಸಮಯದಲ್ಲಿ ಭೂಮಿಯ ಸುಮಾರು 23.5 ಡಿಗ್ರಿಗಳಷ್ಟು ಓರೆಯಾಗಿರುತ್ತದೆ. ಆದ್ದರಿಂದ ಸೂರ್ಯ ಮಧ್ಯಾಹ್ನದ ಸಮಯದಲ್ಲಿ ಸಮಭಾಜಕದ ಉತ್ತರ ಮತ್ತು ದಕ್ಷಿಣದ ಎಲ್ಲ ಡಿಗ್ರಿಗಳಲ್ಲಿ ನೇರವಾಗಿ ಮೇಲಕ್ಕೆ ಹೋಗುತ್ತಾನೆ.

ವರ್ಷಕ್ಕೆ 2 ಬಾರಿ ಬರುವ ಅಚ್ಚರಿ:ಶೂನ್ಯ ನೆರಳಿನ ದಿನವನ್ನು ಪ್ರತಿ ವರ್ಷದಲ್ಲಿ ಎರಡು ಬಾರಿ ಮಾತ್ರ ಕಾಣಬಹುದು. ಒಮ್ಮೆ ಸೂರ್ಯನ ಉತ್ತರ ಚಲನೆ ಮತ್ತೊಮ್ಮೆ ಸೂರ್ಯದ ದಕ್ಷಿಣ ಚಲನೆಯಲ್ಲಿ ಕೌತುಕ ವೀಕ್ಷಿಸಬಹುದು. ಏಪ್ರಿಲ್, ಮೇ ಮತ್ತು ಆಗಸ್ಟ್ ತಿಂಗಳಿನ ಒಂದು ದಿನ ಕೆಲ ನಿಮಿಷಗಳ ಕಾಲ ಶೂನ್ಯ ನೆರಳು ಗೋಚರಿಸುತ್ತದೆ.

ವಿಜ್ಞಾನಾಸಕ್ತರು ಸೇರಿದಂತೆ ಸಮಸ್ತರು ಈ ಖಗೋಳ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯ ವಿಜ್ಞಾನ, ಖಗೋಳ ಕೇಂದ್ರಗಳಲ್ಲಿ ಈ ರೀತಿಯ ವಿದ್ಯಮಾನ ನೋಡಲು ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ನಿಗದಿತ ಸಮಯದಂದು ಮನೆಯ ಹೊರಕ್ಕೆ ಬಂದು ಬಿಸಿಲಲ್ಲಿ ನಿಂತು ನೆರಳು ಕಾಣದ ಅಚ್ಚರಿಯನ್ನು ಪರಿಶೀಲಿಸಬಹುದಾಗಿದೆ. ಯಾವುದಾದರೂ ವಸ್ತುವನ್ನು ಇಟ್ಟು ಅದರ ನೆರಳು ಕಾಣಿಸುತ್ತದೆಯೇ ಎಂದು ಪರೀಕ್ಷಿಸಬಹುದಾಗಿದೆ.

ಶೂನ್ಯ ನೆರಳಿನ ದಿನ ಎಂದರೇನು?:ಪ್ರತಿವರ್ಷ ಏಪ್ರಿಲ್, ಮೇ ಅಥವಾ ಆಗಸ್ಟ್‌ ನಲ್ಲಿ ಈ ಖಗೋಳ ವಿಸ್ಮಯದ ಚಮತ್ಕಾರ ನಡೆಯುತ್ತದೆ. ನಮ್ಮ ನೆರಳು ನಮಗೆ ಕಾಣದಂತೆ ಆಗುವುದನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:ಸೂರ್ಯನ ಕೌತುಕ: 'ಶೂನ್ಯ ನೆರಳಿನ ದಿನ'ಕ್ಕೆ ಸಾಕ್ಷಿಯಾದ ಕಾರವಾರ

ABOUT THE AUTHOR

...view details